July 25, 2021

ಎರಡನೇಯ ವರ್ಷದ ಬರ್ತ ಡೇ ಆಚರಿಸಿಕೊಂಡ ಪೊಲೀಸ್ ಡಾಗ್ ಸ್ಕ್ವಾಡ್ ನ “ಬ್ಯೂಟಿ” ಕನಕ..!

ಹಾವೇರಿ – ಹಾವೇರಿ ಜಿಲ್ಲೆ ಅಂದರೆ ತಕ್ಷಣ ನೆನಪಿಗೆ ಬರೋದು ಕನಕದಾಸರು. ಅದರೆ ಹಾವೇರಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ಓರ್ವ ಕನಕ ಇದ್ದಾನೆ.‌ ಈಗ ಆತನಿಗೆ ಎರಡು ವರ್ಷ. ಹಾವೇರಿ ಜಿಲ್ಲಾ ಪೊಲೀಸ್ ಶ್ವಾನದಳ ಕಿಂಗ್ ಗೆ ಎರಡನೇಯ ವರ್ಷದ ಹುಟ್ಟು ಹಬ್ಬವನ್ನ ಆಚರಣೆ ಮಾಡಲಾಯಿತು.

ಬಾಂಬ್ ನಿಷ್ಕ್ರೀಯ ದಳದ ಕನಕನ ತರಬೇತುದಾರರಾದ ಶ್ರೀಕಾಂತ ಕಬ್ಬೂರು, ಶಿವರಾಜ್, ಮಹಾಂತೇಶ ಹರಿಜನ ರವರು ಕೇಕ್ ಕತ್ತರಿಸಿ, ಕನಕನಿಗೆ ಚೆಂದ ಟೋಪಿ ಹಾಕಿ ಜನ್ಮದಿನ ಆಚರಣೆ ಮಾಡಿದರು. ಈ ವೇಳೆ ಡಿಎಆರ್ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕ ಹಾಜರಿದ್ದರು.

ಕನಕ 2019 ರಿಂದ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಪರಾಧ ವಿಭಾಗದ ಸೇವೆಯನ್ನ ಆರಂಭಿಸಿದ್ದಾನೆ.‌ ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಮುಗಿಸಿದ ನಂತರ ಕನಕ ಹಾವೇರಿ ಜಿಲ್ಲೆಯಲ್ಲಿ ತನ್ನ ಸೇವೆ ಪ್ರಾರಂಭಿಸಿದ್ದಾನೆ.

ಕನಕ ಶ್ವಾನವು 2019 ರಲ್ಲಿ ಬೆಸ್ಟ್ ಬ್ಯೂಟಿ ಆಫ್ ಬೆಂಗಳೂರು ಪ್ರಶಸ್ತಿ ಯನ್ನು ಡಿಐಜಿಯಿಂದ ಪಡೆದುಕೊಂಡಿದೆ. ನಂತರ 2020 ರಲ್ಲಿ ದಾವಣಗೆರೆ ವಲಯದಲ್ಲಿ ಪ್ರಶಸ್ತಿ, ರಾಜ್ಯ ಮಟ್ಟದ ಕರ್ತವ್ಯ ಕೂಟದಲ್ಲಿ ಪ್ರಶಸ್ತಿ ಲಭಿಸಿದೆ.

ಅಲ್ಲದೇ ಪ್ರಧಾನಮಂತ್ರಿ ತಂಗುದಾಣದಲ್ಲಿ ಕರ್ತವ್ಯ ಲೋಪವಾಗದಂತೆ ಉತ್ತಮ ಸೇವೆ‌, ಉಪರಾಷ್ಟ್ರಪತಿಯವರ ಬೆಂಗಾವಲು ಕರ್ತವ್ಯದಲ್ಲಿ ಅತ್ಯುತ್ತಮ ನಿರ್ವಹಣೆ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಚಾಣಾಕ್ಷತನವನ್ನು ಕನಕ ಹೊಂದಿದ್ದಾನೆ.

ಕನಕ ಕಿಂಗ್ ಗೆ ಈಗ ಎರಡು ವರ್ಷದ ಜನ್ಮದಿನ ಸಂಭ್ರಮ. ಹ್ಯಾಪಿ ಬರ್ತಡೇ ಕನಕ. ನಿನ್ನ ಸೇವೆ ಹೀಗೆ ಮುಂದುವರೆಯಲಿ ಆಲ್ ದಿ ಬೇಸ್ಟ್ ಕನಕ…

Share this News
error: Content is protected !!