ಬಿಸಿ ಸುದ್ದಿ
October 20, 2021

ಹಾವೇರಿ ಜಿಲ್ಲೆಯಲ್ಲಿ ಕೊರೋನಾಕ್ಕೆ ಇಂದು 6 ಬಲಿ: ಒಂದೇ ದಿನ 409 ಸೋಂಕು ಧೃಡ..!

ಹಾವೇರಿ – ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅಬ್ಬರಕ್ಕೆ ಇಂದು ಆರು ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಇಂದು ಆರು ಜನರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದೃಡಪಡಿಸಿದ್ದಾರೆ.

ಹಾವೇರಿ ತಾಲೂಕಿನ 61ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಿರೇಕೆರೂರು ತಾಲೂಕಿನ 53 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಹಾನಗಲ್ ತಾಲ್ಲೂಕು 45 ವರ್ಷದ ಸಾವನ್ನಪ್ಪಿದ್ದಾನೆ. 72 ಮತ್ತು 82 ಶಿಗ್ಗಾಂವಿ ತಾಲ್ಲೂಕು ಸೋಂಕಿತರು ಮೃತಪಟ್ಟಿದ್ದಾರೆ.ಹಾವೇರಿ ತಾಲ್ಲೂಕು 59 ವರ್ಷದ ವ್ಯಕ್ತಿ ಸೋಂಕಿತ ಸಾವನ್ನಪ್ಪಿದ್ದಾನೆ ‌ಎಂದು ಆರೋಗ್ಯ ಇಲಾಖೆ ದೃಢಕರಿಸಿದೆ

ಹಾವೇರಿ ಜಿಲ್ಲೆಯಲ್ಲಿ ಇವತ್ತು 409 ಜನರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 239 ಏರಿದೆ. ಜಿಲ್ಲೆಯಲ್ಲಿ ಕೊರೋನಾ ಸಕ್ರೀಯ 1249 ಪ್ರಕರಣಗಳು ಇವೆ. ಜಿಲ್ಲೆಯಲ್ಲಿನ ಈವರೆಗಿನ ಕೊರೋನಾ ಸೋಂಕಿತರ ಸಂಖ್ಯೆ 13560 ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್ ಮಾಹಿತಿ ನೀಡಿದ್ದಾರೆ.

Share this News
error: Content is protected !!