July 25, 2021

ಮತ್ತೊಂದು ಆಕ್ಸಿಜನ್ ದುರಂತ: ಐದು ಜನರ ಸಾವು..!?

ಹುಬ್ಬಳ್ಳಿ – ಕೊರೋನಾ ಎರಡನೇ ಅಲೆ ಜನರ ಆಂತಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರೆ ಆಕ್ಸಿಜನ್ ಸಮಸ್ಯೆಯಿಂದ ಐವರು ಕೊರೋನಾ ಸೋಂಕಿತರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಖಾಸಗಿ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಸಂಭವಿಸಿದೆ ಎಂದು ಶಂಕೆವ್ಯಕ್ತವಾಗಿದೆ. ಇತ್ತ ಕುಟುಂಬಸ್ಥರು ಆಕ್ಸಿಜನ್ ಕೊರತೆಯಿಂದಲೇ ದುರ್ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇನ್ನು ಸ್ಥಳಕ್ಕೆ ಡಿಎಚ್ಓ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರನ್ನ ವಾಣಿ ಜನ್ನು ,ವಿನಯಾ ನಾಯಕ,
ಬಾಲಚಂದ್ರ,ದೇಸಾಯಿಗೌಡ ಹಾಗೂ ಸುಶಾಂತ ದ್ರೋಣಾವತ್ತ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಎಚ್ಓ ಯಶವಂತ್ ಮದನಿಕರ ಅವರು, ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಯಾವ ಆಕ್ಸಿಜನ್ ಸಮಸ್ಯೆ ಅಥವಾ ಯಾವ ಸಮಸ್ಯೆ ಅನ್ನೋದು ತನಿಖೆಯ ನಂತರ ತಿಳಿಯಲಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಸುರಕ್ಷತೆಯಿಂದ ಜನರು ಇರಬೇಕಾಗಿದೆ.

Share this News
error: Content is protected !!