May 19, 2021

ಮಹಾ ದುರಂತ ತಪ್ಪಿಸಿ 18 ಜನರ ಜೀವ ಕಾಪಾಡಿದ ಇನ್ಸಪೆಕ್ಟರ್..!

ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಅದರಲ್ಲೂ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಅದರೆ 20 ಕ್ಕೂ ಹೆಚ್ಚು ರೋಗಿಗಳು ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಮಧ್ಯರಾತ್ರಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಒಬ್ಬರೋಗಿ ಆಗಲೇ ಸಾವಿನ ಮನೆ ಸೇರಿದ್ದರು. ಆಕ್ಸಿಜನ್ ಗಾಗಿ ಪ್ರಯತ್ನಿಸಿ ಸೋತ ಆಸ್ಪತ್ರೆ ಸಿಬ್ಬಂದಿ ಎಲ್ಲೂ ಆಕ್ಸಿಜನ್ ಸಿಗದೇ ಹೋದಾಗ ಕೊನೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮೊರೆ ಹೋದರು. ರೋಗಿಗಳ ಜೀವಕಾಪಾಡಲು ಸನ್ನದ್ಧರಾದ ಇನ್ಸಪೆಕ್ಟರ್ ಕೊನೆಗೂ ಬಾಲಿವುಡ್ ನಟನ ನೆರವಿನಿಂದ 18 ಜನರ ಪ್ರಾಣ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಯಲಹಂಕದ ಆರ್ಕಾ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿತ್ತು. ಎಲ್ಲೆಡೆ ಪ್ರಯತ್ನಿಸಿದರೂ ಆಸ್ಪತ್ರೆ ಸಿಬ್ಬಂದಿಗೆ ಆಕ್ಸಿಜನ್ ಸಿಲಿಂಡರ್ ಸಿಕ್ಕಿರಲಿಲ್ಲ. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಯಲಹಂಕ ಪೊಲೀಸ್ ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ ಅವರನ್ನು ಸಂಪರ್ಕಿಸಿದ್ದಾರೆ. ತಕ್ಷಣ ರೋಗಿಗಳ ಪ್ರಾಣ ಕಾಪಾಡಲು ಕಾರ್ಯಪ್ರವೃತ್ತರಾದ ಸತ್ಯನಾರಾಯಣ, ಹಲವು ಕಡೆ ಪ್ರಯತ್ನಿಸಿದ್ದಾರೆ. ಆದರೆ ಸಿಲಿಂಡರ್ ಸಿಗಲಿಲ್ಲ.

ಕೊನೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವಾರ್ ರೂಂ ಮೂಲಕ ಸೋನುಸೂದ್ ಟ್ರಸ್ಟ್ ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ ಮೂರು ತಾಸಿನಲ್ಲಿ 15 ಆಕ್ಸಿಜನ್ ಸಿಲೆಂಡರ್ ತರಿಸಿ ಅರ್ಕಾ ಆಸ್ಪತ್ರೆಗೆ ಪೊರೈಸಿ ಬರೋಬ್ಬರಿ 18 ಜನರ ಪ್ರಾಣ ಕಾಪಾಡಿದ್ದಾರೆ.

ಸತ್ಯನಾರಾಯಣ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಆಕ್ಸಿಜನ್ ಕೊರತೆಯನ್ನ ನಿಗಿಸಿ, 18 ಜನರು ಪ್ರಾಣ ಉಳಿಸಿದರೆ. ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!