June 22, 2021

ಸ್ವಂತ ದುಡ್ಡಿನಿಂದ ಕ್ಷೇತ್ರದ ಜನರಿಗೆ ಆಕ್ಸಿಜನ್ ಒದಗಿಸಲು ಮುಂದಾದ ಸಂಸದೆ..!

ಮಂಡ್ಯ – ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಸಮಸ್ಯೆ ಹೆಚ್ಚಾಗುತ್ತಿದೆ.ಅದ್ರೆ ಈಗ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಿಲ್ಲೆಯ ಆಕ್ಸಿಜನ್ ಸಮಸ್ಯೆಗೆ ಸ್ಪಂದಿಸಿ ಸ್ವಂತ ದುಡ್ಡಿನಲ್ಲೇ ಆಕ್ಸಿಜನ್ ಪೊರೈಕೆಗೆ ಮುಂದಾಗಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ ಎಲ್ಲ ಜಿಲ್ಲಾಢಳಿತಕ್ಕೆ ಚುರುಕು ಮುಟ್ಟಿಸಿದ್ದು, ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಸಂಸದೆ ಸುಮಲತಾ ಅಂಬರೀಶ್ ಜಿಲ್ಲೆಯ ಆಕ್ಸಿಜನ್ ಕೊರತೆಗೆ ತುರ್ತು ಸ್ಪಂದನೆ ನೀಡಿದ್ದಾರೆ. ಅಷ್ಟೇ ಅಲ್ಲ ಸದ್ಯ ಸಂಸದರ ನಿಧಿಯಲ್ಲಿ ಅನುದಾನವಿಲ್ಲದ ಕಾರಣ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿನಿತ್ಯ ಅಗತ್ಯವಿರುವ 3 ಸಾವಿರ ಲೀಟರ ಆಕ್ಸಿಜನ್ ಒದಗಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಸಂಸದೆ ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮಂಡ್ಯ ಜಿಲ್ಲೆಯ ಎಂಪಿಯಾಗಿ ಕೊರೋನಾ ಸಂಕಷ್ಟದಲ್ಲಿ ನನ್ನ ಹೋರಾಟ ಜಾರಿಯಲ್ಲಿದೆ. ನನ್ನ ಸ್ವಪ್ರಯತ್ನದಿಂದ ತಡೆರಹಿತವಾಗಿ ಸೇವೆ ಮುಂದುವರೆಯುತ್ತದೆ. ಮಂಡ್ಯ ಜಿಲ್ಲೆಯ ಈಗಿನ ಮತ್ತು ಮುಂದಿನ ಅಗತ್ಯತೆಗಳು ನನ್ನ ಮೊದಲ ಆದ್ಯತೆ. ಇದು ರಾಜಕೀಯ ಮಾಡುವ ಸಮಯವಲ್ಲ. ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಡಿಎಚ್ಓ ಮಂಡ್ಯ ಜಿಲ್ಲೆಗೆ ಪ್ರತಿನಿತ್ಯ 3 ಸಾವಿರ ಲೀಟರ್ ಆಕ್ಸಿಜನ್ ಕೊರತೆ ಇರುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಸದ್ಯ ಸಂಸದರ ನಿಧಿಯಲ್ಲಿ ದುಡ್ಡಿಲ್ಲ. ನಿಧಿ ಸಂಗ್ರಹಕ್ಕೆ ವಿಳಂಬವಾಗಬಹುದು. ಹೀಗಾಗಿ ನನ್ನ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೊರೈಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ..

ಮಂಡ್ಯ ಸಂಸದೆಯ ಸುಮಲತಾ ಅಂಬರೀಶ್ ಅವರ ಈ ಕಾರ್ಯಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮಂಡ್ಯದ ಸಂಸದೆ ಏಲ್ಲಿದ್ದಾರೆ ಅನ್ನೋ ಟ್ರೋಲ್ ಹಾಗೂ ಟ್ವಿಟ್ ಮಾಡುವ ಜನರಿಗೆ ತಮ್ಮ ಕೆಲಸದ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

Share this News
error: Content is protected !!