June 18, 2021

ಭೂಗತ ಪಾತಕಿ ಛೋಟಾ ರಾಜನ್ ಕೊರೋನಾ ಸೋಂಕಿಗೆ ಬಲಿ..!

ಮುಂಬೈ : ಕರೋನಾಕ್ಕೆ ಭೂಗತ ಪಾತಕಿ ಛೋಟಾ ರಾಜನ್ ಬಲಿಯಾಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಂದು ಕೊರೊನಾಗೆ ಬಲಿಯಾಗಿದ್ದಾನೆ. ಈ ಕುರಿತು ಏಮ್ಸ್ ವೈದ್ಯರು ಖಚಿತ ಪಡಿಸಿದ್ದಾರೆ.

ವಿದೇಶದಿಂದ ಗಡಿಪಾರಾಗಿದ್ದ ಛೋಟಾ ರಾಜನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದರು. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Share this News
error: Content is protected !!