June 18, 2021

ಏ.. ವಿಧಿ ನೀನೆಷ್ಟು ಕ್ರೂರಿ.. ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆಯಿತು ಕರುಳು ಚುರ್ರೆನ್ನುವ ಘಟನೆ..!

ಹಾವೇರಿ – ಕೊರೋನಾ ಸೋಂಕಿನಿಂದ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು 23 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾಳೆ.

ಮೃತ ಮಹಿಳೆಗೆ ಎರಡೂವರೆ ತಿಂಗಳ ಹಿಂದೆ ಹೆರಿಗೆಯಾಗಿತ್ತು. ಹೆರಿಗೆ ನಂತರದ ಕೆಲವು ದಿನಗಳಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ಲು. ಎರಡು ತಿಂಗಳ ಹಿಂದೆ ಹೆರಿಗೆ ನಂತರ ಕೆಲವು ದಿನಗಳಲ್ಲಿ ಮಗು ಮಗು ಮೃತಪಟ್ಟಿತ್ತು. ಮಗು ಮತ್ತು ಪತ್ನಿಯನ್ನು ಕಳೆದುಕೊಂಡ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

 

ಅಸ್ವಸ್ಥ ಪತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‌ಸದ್ಯ ಆರೋಗ್ಯ ಸ್ಥಿರವಾಗಿದೆ. ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ. ಎಚ್.ಎಸ್. ದೃಡಪಡಿಸಿದ್ದಾರೆ.

 

 

____

Share this News
error: Content is protected !!