March 7, 2021

SHIGGOAN | ಅನಾರೋಗ್ಯ ಪರಿಸರಕ್ಕೆ ಆಧುನಿಕ ಜೀವನ ಶೈಲಿ ಕಾರಣ: ಪ್ರೊ.ಕೆ.ಎನ್.ಗಂಗಾನಾಯಕ್

ಗೊಟಗೋಡಿ/ಶಿಗ್ಗಾವಿ: ಅನಾರೋಗ್ಯ ಪರಿಸರ ಮತ್ತು ಸಮಾಜದ ನಿರ್ಮಾಣಕ್ಕೆ ಆಧುನಿಕ ಜೀವನ ಶೈಲಿ ಹಾಗೂ ಅಪ್ರಯೋಜಕ ಚಟುವಟಿಕೆಗಳೇ ಕಾರಣ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ.ಕೆ.ಎನ್.ಗಂಗಾನಾಯಕ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ, ಹಾವೇರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣಾ ಕೋಶ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಇವರುಗಳ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿನ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದೈಹಿಕ ಶ್ರಮ ಇಲ್ಲದ ಜೀವನ, ರಾಸಾಯನಿಕ ಬಳಸಿ ಬೆಳೆದ ಆಹಾರ ಪದಾರ್ಥ, ದೇಸಿ ಆಹಾರಗಳ ನಿರ್ಲಕ್ಷ್ಯದಂತಹ ವಿಷಯಗಳು ಕ್ಯಾನ್ಸರ್ಗೆ ಕಾರವಾದರೂ, ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿರುವ ಜನರ ಜೀವನದ ನಿತ್ಯ ಚಟುವಟಿಕೆಗಳು ಹಾಗೂ ದುಶ್ಚಟಗಳು ಕ್ಯಾನ್ಸರ್‍ನಂತಹ ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ಸಮಾಜದಲ್ಲಿನ ಅನಾರೋಗ್ಯ ಪೀಡಿತ ಜನರನ್ನು ಸಾಂತ್ವನ ಹೇಳುವ ಜೊತೆಗೆ ಅವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ  SHIGGAON| ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿ, 18ನೇಯ ದಿನಕ್ಕೆ ಕಾಲಿಟ್ಟ ಧರಣಿ

ಕರ್ನಾಟಕ ವಿಶ್ವವಿದ್ಯಾಲಯದ ಹಾವೇರಿ ಕೆರೆಮತ್ತೀಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ.ಪ್ರಶಾಂತ ಹೆಚ್.ವೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಸಾಮಾನ್ಯ ಜನರ ಸಮಸ್ಯೆಯಿಂದ ಹಾಗೂ ಅನಾರೋಗ್ಯದಿಂದ ನರಳುತ್ತಿದ್ದರೇ ಸಮಾಜಕಾರ್ಯ ವಿದ್ಯಾರ್ಥಿಗಳು ಸಾಂತ್ವನ ನೀಡಿ ಆತ್ಮವಿಸ್ವಾಸ ತುಂಬಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.

ಇದನ್ನೂ ಓದಿ  ಕೊರೋನಾ ಲಸಿಕೆ ಪಡೆದ ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಏನು‌ ಹೇಳಿದ್ರು ಗೊತ್ತಾ..?

ಅನುವಂಶಿಯವಾಗಿ ಬರುವ ಘೋರ ಮಾರಕ ಖಾಯಿಲೆಗಳನ್ನು ಕಾಣಬಹುದು. ಅದರೊಂದಿಗೆ ತಂಬಾಕು, ಮಧ್ಯಪಾನ ವ್ಯಸನದಿಂದಲೂ ಕ್ಯಾನ್ಸರ್ ನಂತಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಏಳು ಸಾವಿರದಷ್ಟು ರಾಸಾಯನಿಕ ವಸ್ತುಗಳು ಧೂಮಪಾನದಿಂದ ಮನುಷ್ಯನ ದೇಹ ಸೇರುತ್ತಿವೆ. ಅವುಗಳಲ್ಲಿ 50ಕ್ಕೂ ಹೆಚ್ಚು ರಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಬಹುದಾಗಿದೆ ಎಂದು ತಂಬಾಕು ವ್ಯಸನಿಗಳಿಗೆ ಎಚ್ಚರಿಸಿದರು.
ಹಾವೇರಿ ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ಸಂಯೋಜಕರಾದ ಶ್ರೀ ದಾದಾಪೀರ್ ಹುಲಕಟ್ಟಿ ಅವರು ತಂಬಾಕು ನಿಯಂತ್ರಣಕ್ಕಾಗಿ ಇರುವ ಕಾಯ್ದೆಗಳು, ದುಶ್ಚಟಗಳಿಂದ ಆಗುವ ಪರಿಣಾಮಗಳು ಮತ್ತು ದೇಶದಲ್ಲಿನ ರೋಗಿಗಳ ಅಂಕಿ ಅಂಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದನ್ನೂ ಓದಿ  ವ್ಯಾಕ್ಸಿನ್ ಪ್ರಕರಣ: ಜಿಲ್ಲಾ ಆರ್.ಸಿ.ಎಚ್ ಡಾ.ಜಯಾನಂದ್ ಗೆ ನೋಟಿಸ್. ‌ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡುವುದಾಗಿ ಎಚ್ಚರಿಕೆ.

­

ಜಾನಪದ ವಿವಿಯ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ದುಶ್ಚಟದಿಂದ ಆಗುವ ದುಶ್ಪರಿಣಾಮವನ್ನು ಬಿಂಬಿಸುವ ಮತ್ತು ಜಾಗೃತಿ ಮೂಡಿಸುವ ಮೈಮ್ ಪ್ರದರ್ಶನ ನೀಡಿದರು.

ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ಶ್ರೀ ಗದಿಗಯ್ಯ ಪ್ರಾರ್ಥಿಸಿದರು, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕುಮಾರಿ ಪಲ್ಲವಿ ಕಡೆವಾಡೆ ಸ್ವಾಗತಿಸಿದರು, ಎಂ.ಎಸ್.ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರೀತಮ್ ಬಾಯರ್ ಅವರು ಪಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಎಂ.ಎಸ್.ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಮಾರಿ ಶೃತಿ ನಾಯಕ್ ಅವರು ವಂದಿಸಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!