June 13, 2021

ಹಾವೇರಿ ಲಾಕಡೌನ್: ಏನು ಮಾಡಬೇಕು..‌ ಏನು ಮಾಡಬಾರದು..!?

ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಲಾಕ್ ಡೌನ್ ಕುರಿತಂತೆ ಕೆಳಗಿನಂತೆ ನಿರ್ದೇಶನ ನೀಡಿದ್ದು ಸಾರ್ವಜನಿಕರಿಗೆ ಮೈಕ್ ಮೂಲಕ ಹಾಗೂ ಟಾಸ್ಕ್ ಪೋರ್ಸ ತಂಡದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.

೧.ಯಾವುದೇ ದ್ವಿಚಕ್ರ ವಾಹನಗಳು ಸೇರಿದಂತೆ ಪ್ರಯಾಣಿಕರ ವಾಹನಗಳ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

೨.ಬೆಳಿಗ್ಗೆ 6- 10 ಅಗತ್ಯ ವಸ್ತುಗಳ ದಿನಸಿ ತರಕಾರಿ ಅಂಗಡಿಗಳು ತೆರೆಯಲು ಅವಕಾಶವಿದೆ. ಆದರೆ ಸಾರವಜನಿಕರು ನಡೆದು ಹೋಗಿ ಖರೀದಿ ಮಾಡಬೇಕು.
ವಾಹನಗಳಲ್ಲಿ ಹೋಗುವಂತಿಲ್ಲ.

೩.ಅತ್ಯವಶ್ಯಕ ವಸ್ತುಗಳ ಸಾಗಿಸುವ ಗೂಡ್ಸ್ ವಾಹನಗಳ ಓಡಾಟಕ್ಕೆ ಅವಕಾಶವಿದೆ.

೪.ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಹೋಗಲು ವಾಹನ ಅಗತ್ಯವಿದ್ದಲ್ಲಿ ತಹಶಿಲ್ದಾರರ ಕಚೇರಿಯಲ್ಲಿ ಕಡ್ಡಾಯವಾಗಿ ವಾಹನದ ಪಾಸ್ ಪಡೆದು ಓಡಾಡಬೇಕು.ಶೇ೫೦ ಮಾತ್ರ ಪ್ರಯಾಣಕ್ಕೆ ಅವಕಾಶ (ಮಾಲೀಕರು ಸೇರಿ).

೫.ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಪಡೆದ ೪೦ ಜನಕ್ಕೆ ಮಾತ್ರ ಅವಕಾಶ.

೬.ಅಂತರ್ ಜಿಲ್ಲೆ ಓಡಾಟ ಸಂಪೂರ್ಣ ನಿಷೇಧ. ಹೊರ ಜಿಲ್ಲೆ ರಾಜ್ಯದಿಂದ ಬಂದವರ ಮಾಹಿತಿಯನ್ನು ಸಂಗ್ರಹಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗಲು ತಿಳಿಸಬೇಕು.

೭.ತುರ್ತು ಆರೋಗ್ಯ ಸಮಸ್ಯೆ ಇದ್ದಲ್ಲಿ ಪ್ರಯಾಣಿಕರ ವಾಹನದ ಮೂಲಕ ಆಸ್ಪತ್ರೆ ಹೋಗಲು ಅನುಮತಿಸಿದೆ.

೮.ಕೋವಿಡ್ ವ್ಯಾಕ್ಸಿನೇಷನ್‌ ತೆಗೆದುಕೊಳ್ಳುವ ಹೋಗುವರು ರಿಜಿಸ್ಟರೇಶನ್ ಮೆಸೇಜು ತೋರಿಸಬೇಕು.

೯.ತಳ್ಳು ಗಾಡಿ, ಟಂಟಂ ಗೂಡ್ಸ ಮೂಲಕ ತರಕಾರಿ ಮಾರಾಟವನ್ನು ಬೀದಿಗಳಿಗೆ ತೆರಳಿ ಮಾಡಲು ಬೆಳಿಗ್ಗೆ 6 -ಸಂಜೆ 6ವರೆಗೆ ಅವಕಾಶವಿದೆ.

೧೦.ಛತ್ರ ಸಮುದಾಯ ಭವನ,ದೇವಸ್ತಾನದಲ್ಲಿ ಮದುವೆ ನಿಷೇಧಿಸಲಾಗಿದೆ. ಮದುವೆಗೆ ೪೦ ಜನ ಮಿತಿಗೆ ಒಳಪಟ್ಟು ಅವಕಾಶವಿದೆ.

೧೧.ಯಾವುದೆ ಗುಂಪು ಸೇರುವಂತಿಲ್ಲ.

೧೨.ನಿಷೇಧ ಉಲ್ಲಂಘಿಸಿ ಓಡಾಡುವ ವಾಹನಗಳು ಮತ್ತು ಅನಗತ್ಯ ಓಡಾಡುವ ವ್ಯಕ್ತಿಗಳ ಮೇಲೆ FIR/ದಂಡ/ವಾಹನಗಳ ಸೀಜ್ ಮಾಡಲಾಗುತ್ತದೆ.

೧೩.ಶವ ಸಂಸ್ಕಾರಕ್ಕೆ 5 ಜನರ ಮಿತಿ

೧೪.ಹೋಟೆಲ್ ಬಾರ್ ಪಾರಸೆಲ್ ಮಾತ್ರ ಅವಕಾಶ.

೧೫.ಅಗತ್ಯ ಸರ್ಕಾರಿ ಸೇವೆಯಲ್ಲಿ ಇರುವ ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು.

ಕಡ್ಡಾಯವಾಗಿ ಮೇಲಿನ ವಿಚಾರವನ್ನು ಸಾರ್ವಜನಿಕವಾಗಿ ಪ್ರಚುರಪಡಿಸಿ ತಿಳುವಳಿಕೆ ಮೂಡಿಸಲು ತಕ್ಷಣವೇ ಕ್ರಮ ಕೈಗೊಳ್ಳಿ. ಮೈಕಿಂಗ್, ಗ್ರುಪ್ ಮೆಸೇಜುಗಳ ಮೂಲಕ, ಗ್ರಾಪಂ ಸದಸ್ಯರ ಮೂಲಕ, ಟಾಸ್ಕ್ ಪೋರ್ಸು ತಂಡದ ಸದಸ್ಯರ ಮೂಲಕ ಪ್ರಚಾರ ಮಾಡಿ ಎಂದು ಹೇಳಿದ್ದಾರೆ.

Share this News
error: Content is protected !!