June 18, 2021

ಕೊರೋನಾ ಸೋಂಕಿತರಿಗಾಗಿ ಅಂಬ್ಯುಲೆನ್ಸ್ ದಾನ ನೀಡಿದ ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್..!

ಹಾವೇರಿ – ಹಾವೇರಿ‌ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ‌ ಹೆಚ್ಚಾಗುತ್ತಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.

ಏಳೂವರೆ ಲಕ್ಷ ರುಪಾಯಿ ವೆಚ್ಚದಲ್ಲಿ ಖರೀದಿಸಿರೋ ವೆಂಟಿಲೇಟರ್ ಸಹಿತ‌ ಅಂಬ್ಯುಲೆನ್ಸ್ ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ರಾಣೇಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಸಮ್ಮುಖದಲ್ಲಿ ಅಂಬ್ಯುಲೆನ್ಸ್ ನ್ನ ಕೊರೋನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸೋಕೆ‌ ನೀಡಿದ್ದಾರೆ.

ರಾಣೇಬೆನ್ನೂರು ತಾಲ್ಲೂಕು ಪಂಚಾಯತಿ ಯ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ‌ ಮಾಡೋ ಜವಾಬ್ದಾರಿಯನ್ನ ಶಾಸಕ ಅರುಣಕುಮಾರ ಪೂಜಾರಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್ ರು ಒದಗಿಸಿರೋ ಅಂಬ್ಯುಲೆನ್ಸ್ ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋ‌ ಕೆಲಸಕ್ಕೆ ಶಾಸಕ‌ ಪೂಜಾರ ಮುಂದಾಗಿದ್ದಾರೆ. ತಾಲೂಕಿನಲ್ಲಿ ಸೋಂಕಿತರಾಗೋ ಜನರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯ್ತಿ ಆವರಣದಲ್ಲಿರೋ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದ್ರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸೋ ಕೆಲಸ ಮಾಡುತ್ತದೆ. ಒಟ್ನಲ್ಲಿ ಪ್ರಧಾನ ಅರ್ಚಕರು ಅಂಬ್ಯುಲನ್ಸ್ ದಾನ‌ಮಾಡಿದ್ರೆ, ರಾಣೇಬೆನ್ನೂರು ಶಾಸಕ ಅರುಣಕುಮಾರ ಪೂಜಾರ ನಿರ್ವಹಣೆ ಮಾಡುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಉತ್ತಮ ಕಾರ್ಯಕ್ಕೆ ನಮ್ಮ ಸಲಾಂ.

 

______

Share this News
error: Content is protected !!