June 22, 2021

GUTTAL| ಎಪಿಎಂಸಿ ಏಜೆಂಟಿನ ಚಂದಾ ವಸೂಲಿ ಯಡವಟ್ಟು, ಸಂತೆಗೆ ಬಂದಿದ್ದವರಿಗೆ ಬಿತ್ತು ಪೈಪಿನ ಏಟು..!

ಹಾವೇರಿ- ಸರ್ಕಾರದ ಇವತ್ತಿನಿಂದ ಟಫ್ ರೂಲ್ಸ್ ಜಾರಿಗೆ ಮಾಡಿದೆ. ಸೋಮವಾರದ ಸಂತೆಗೆ ಬಂದಿದ್ದವರಿಗೆ ಪೈಪ್ ನಿಂದ ರುಚಿ ತೋರಿಸಿದ ಘಟನೆ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಎಪಿಎಂಸಿ ಮಾರ್ಕೆಟ್ ನಲ್ಲಿ ತರಕಾರಿ ಮಾರಾಟ ಮಾಡಲು ವ್ಯಾಪಾರಿಗಳು ಬಂದಿದ್ದರು.

ಸರಕಾರದ ರೂಲ್ಸ್ ಬ್ರೇಕ್ ಮಾಡಿ ಗುಂಪು ಗುಂಪಾಗಿ ಕುಳಿತು ಸಂತೆ ಆರಂಭಿಸಲು ಏಕಾಏಕಿ ಗರಂ ಆಗಿ ಭರ್ಜರಿಯಾಗಿ ಲಾಠಿ ರುಚಿಯನ್ನ್ನು ಪಿಎಸ್ಐ ಸಿದ್ದಾರೋಡ ಬಡಿಗೇರ ನೀಡಿದ್ದಾರೆ. ಸಂತೆಗೆ ಬಂದಿದ್ದ ಜನರು ಓಡಿ ಹೋದರು.

ನೂರಾರು ಜನರು ಮಾರುಕಟ್ಟೆಗೆ ತರಕಾರಿ ಖರೀದಿಗೆ ಆಗಮಿಸಿದವರು ಕೂಡ ದಿಕ್ಕಾಪಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಚಂದಾ ವಸೂಲಿ ಮಾಡುತ್ತಿದ್ದವನು 10 ಗಂಟೆವರೆಗೂ ಮಾರಬಹುದು ಎಂದು ತಿಳಿಸಿದ್ದರಿಂದ ತರಕಾರಿ ಮಾರಲು ಬಂದಿದ್ದೇವೆಂದು ಅಳಲು ತೋಡಿಕೊಂಡ ವ್ಯಾಪಾರಿಗಳು ಕಣ್ಣೀರು ಹಾಕಿದರು. ಎಪಿಎಂಸಿ ಸಿಬ್ಬಂದಿಯ ಯಡವಟ್ಟಿನಿಂದ ಪೊಲೀಸರಿಂದ ಪೈಪ್ ನಿಂದ ಏಟು ತಿಂದಿದ್ದೇವೆ ಅಂತಿದ್ದಾರೆ ತರಕಾರಿ ವ್ಯಾಪಾರಸ್ಥರು.

____

Share this News
error: Content is protected !!