June 18, 2021

LOCKDOWN NEWS| ಲಾಠಿ ಎತ್ತಲಿಲ್ಲ.. ಬಾಸುಂಡೆ ಬರಿಸಲಿಲ್ಲ.. ಪೊಲೀಸ ಸ್ಟೇಷನ್ ವರೆಗೂ ಬೆವರು ಹರಿಸಿದ್ರು..!

ಹಾವೇರಿ- ಸರ್ಕಾರದ ಇಂದಿನಿಂದ ಹದಿನಾಲ್ಕು ದಿನಗಳ ಲಾಕ್ ಡೌನ್‌ ಘೋಷಣೆ ಮಾಡಿದೆ‌.ಅನಗತ್ಯವಾಗಿ ಹೊರಗೆ ಓಡಾಡಬೇಡಿ ಅಂತಾ ಹೇಳಿದೆ.ಅನಗತ್ಯವಾಗಿ ಬೈಕ್ ಮೇಲೆ ಓಡಾಡೋರಿಗೆ ಬೈಕ್ ಗಳನ್ನು ಪೊಲೀಸ್ ಠಾಣೆವರೆಗೂ ತಳ್ಳಿಕೊಂಡು ಹೋಗೋ ಶಿಕ್ಷೆ ನೀಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ಪೊಲೀಸರು ಎಷ್ಟೇ ತಿಳಿ ಹೇಳಿದರೂ ಜನರ ಓಡಾಟ ಹೆಚ್ಚಾಗಿತ್ತು. ಇದರಿಂದ ರಾಣೇಬೆನ್ನೂರು ಪೊಲೀಸರು ಡಿಫರೆಂಟ್ ಶಿಕ್ಷೆ ನೀಡಿದ್ದಾರೆ.

 

ಅನಗತ್ಯವಾಗಿ ಹೊರಗೆ ಬೈಕ್ ನಲ್ಲಿ ಓಡಾಡ್ತಿದ್ದವರ ಬೈಕ್‌ ಕೀ ವಶಕ್ಕೆ ಪಡೆದುಕೊಂಡಿದ್ದಾರೆ. ಕೀ ತೆಗೆದುಕೊಂಡ ನಂತರ ಬೈಕ್ ಸವಾರರು ತಮ್ಮ ಬೈಕ್ ಗಳನ್ನ ಠಾಣೆವೆರೆಗೂ ತಳ್ಳಿಕೊಂಡು ಹೋಗಿ ದಂಡ ಕಟ್ಟಿ ಹೋಗುವ ಶಿಕ್ಷೆ ನೀಡಿದ್ದಾರೆ. ರಾಣೇಬೆನ್ನೂರು ಪೊಲೀಸರ ಡಿಫರೆಂಟ್ ಶಿಕ್ಷೆಗೆ ಬೈಕ್ ಸವಾರರು ಸುಸ್ತೋ ಸುಸ್ತು ಆಗಿದ್ದಾರೆ. ಇನ್ನೊಮ್ಮೆ ಅನಗತ್ಯವಾಗಿ ನಗರದಲ್ಲಿ ಬರೋದಿಲ್ಲ. ನಮ್ಮ ಬೈ ಕೀ ಕೊಡ್ರೀ ಅಂತಾ ಬೈಕ್ ಸವಾರರು ಮನವಿ ಮಾಡಿಕೊಂಡರು.

 

____

Share this News
error: Content is protected !!