July 25, 2021

ಶಿವನಲ್ಲಿ ಐಕ್ಯವಾದ ದೇವಿಹೊಸೂರು ಶಿವನಂದಿ

ಹಾವೇರಿ – ಉತ್ತರ ಕರ್ನಾಟಕದಲ್ಲಿ ಹೋರಿ ಹಬ್ಬ ಅಂದರೆ ಬಹಳ ಫೇಮಸ್. ಅದರೆ ಹೋರಿ ಓಡಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ ಹಾವೇರಿ ತಾಲ್ಲೂಕು ದೇವಿಹೊಸೂರು ಗ್ರಾಮದ ಶಿವನಂದಿ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ಗ್ರಾಮದ ರೈತ ನಿಂಗಪ್ಪ ಕಬ್ಬೂರು ಕಳೆದ ೧೧ ವರ್ಷಗಳಿಂದ ತಮ್ಮ ಮನೆಯಲ್ಲಿ ಮಗನಂತೆ ಸಾಕಿ ಸಲುಹಿದ್ದರು‌. ಶಿವಮೊಗ್ಗ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಯ ಹೋರಿ ಹಬ್ಬದಲ್ಲಿ ಶಿವನಂದಿ ಹೋರಿ ಹೆಸರು ಮಾಡಿತ್ತು.

ಅನಾರೋಗ್ಯದಿಂದ ಮೃತಪಟ್ಟಿದ್ದು, ಹೋರಿ ಅಭಿಮಾನಿಗಳಿಗೆ ನೋವವನ್ನ ಉಂಟು ಮಾಡಿದೆ. ಹೋರಿ ಹಬ್ಬ. ಬೈಕ್ , ಟಿವಿ, ಸೋಪಾ,ಚಿನ್ನ ಹಾಗೂ ಬೆಳ್ಳಿ ಟ್ರೈಜುರಿ ಸೇರಿದಂತೆ ವಿವಿಧ ಬಹುಮಾನ ಗೆದ್ದಿತ್ತು.

ಗ್ರಾಮದ ತುಂಬಾ ಶಿವನಂದಿ ಹೋರಿಯನ್ನ ಮೆರವಣಿಗೆ ಪಟಾಕಿ ಸಿಡಿಸಿ, ಸಕಲವಾದ್ಯಗಳ ಮೂಲಕ ಮೆರವಣಿಗೆ ಮಾಡಿದರು. ಸಕಲ ವಿಧಿವಿಧಾನಗಳ ಮೂಲಕ ರೈತ ನಿಂಗಪ್ಪ ಕಬ್ಬೂರು ಜಮೀನಿನಲ್ಲಿ ಅಂತ್ಯಕ್ರಿಯೆಯನ್ನ ನೆರೆವೇರಿಸಿದರು. ಅಪಾರ ಅಭಿಮಾನಿಗಳು ಆಗಮಿಸಿ ಶಿವನಂದಿ ಹೋರಿ ಅಂತಿಮ ದರ್ಶನ ಪಡೆದರು. ಶಿವನಂದಿ ಹೋರಿ ಅಭಿಮಾನಿಗಳು ದುಃಖ ತಪ್ತರಾಗಿದ್ದಾರೆ‌.ಇನ್ನು ಶಿವನಂದಿ ಕೊಬ್ಬರಿ ಹೋರಿ ನೆನಪು ಮಾತ್ರ.

______

Share this News
error: Content is protected !!