June 13, 2021

RANEBENNURU| ಸರಿಯಾದ ಸಮಯಕ್ಕೆ 40 ಆಕ್ಸಿಜನ್ ಸಿಲಿಂಡರ್ ಪೂರೈಕೆ: ನೂರಾರು ರೋಗಿಗಳ ಜೀವ ಉಳಿಸಿದ ಬಸವರಾಜ್ ಬೊಮ್ಮಾಯಿ..!

ಹಾವೇರಿ – ರಾಜ್ಯದಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಅದರಲ್ಲೂ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆ ಹೆಚ್ಚಾಗಿ ಸೋಂಕಿತರ ಸಾವು ಹೆಚ್ಚಾಗುತ್ತಿವೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು‌. ಬೆಳಗ್ಗೆ 4-30 ರ ಸುಮಾರಿಗೆ ಆಕ್ಸಿಜನ್ ಕೊರತೆ ಉಂಟಾಗಿ ವೈದ್ಯರಿಗೆ ಆತಂಕ ಸೃಷ್ಠಿಯಾಗಿತ್ತು.

ಕೂಡಲೇ ವೈದ್ಯರು ರಾಣೇಬೆನ್ನೂರು ಶಾಸಕ ಅರುಣುಕುಮಾರ ಪೂಜಾರರ ಗಮನಕ್ಕೆ ತಂದಿದ್ದಾರೆ. ರಾಣೇಬೆನ್ನೂರು ಶಾಸಕರು ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದಿದ್ದಾರೆ. ನಂತರ ಕೇವಲ ಅರ್ಧಗಂಟೆಯಲ್ಲಿ 40 ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ.

ದಾವಣಗೆರೆ ಜಲ್ಲಾಧಿಕಾರಿಗಳೊಂದಿಗೆ ಮಾತನಾಡಿ 40 ಆಕ್ಸಿಜನ್ ಸಿಲಿಂಡರ್ ತರಿಸಿಕೊಟ್ಟು ನೂರಾರು ಜನರ ಜೀವ ಉಳಿಸಿಕೊಟ್ಟ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರಾದ ಸನ್ಮಾನ್ಯಶ್ರೀ ಬಸವರಾಜ ಬೊಮ್ಮಾಯಿರವರಿಗೆ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ಅರಣುಕುಮಾರ ಪೂಜಾರ
ತುಂಬು ಹೃದಯದ  ತಿ್ಳಿಸಿದ್ದಾರೆ.

ಒಟ್ನಲ್ಲಿ ಶಾಸಕ ಅರಣುಕುಮಾರ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಒದಗಿಸಿ ರೋಗಿಗಳ ಪ್ರಾಣ ಉಳಿಸಿದಿದ್ದಾರೆ.

Share this News
error: Content is protected !!