June 13, 2021

ಊಟ, ತಿಂಡಿ, ಚಿಕಿತ್ಸೆ ಸಿಗದೆ ಕೊರೊನಾ ಸೋಂಕಿತರ ಪರದಾಟ..!

ಬ್ಯಾಡಗಿ: ಊಟ, ತಿಂಡಿ, ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರು ಪರದಾಡುವ ಪರಸ್ಥಿತಿ ನಿರ್ಮಾಣವಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ರಾಣಿ ಚೆನ್ನಮ್ಮ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ. ಬ್ಯಾಡಗಿ ಪಟ್ಟಣದ ಹೊರವಲಯದಲ್ಲಿ ಇರೋ‌ ಕೊವೀಡ್ ಕೇರ್ ಸೆಂಟರ್ ನಲ್ಲಿ ಸಮಯಕ್ಕೆ ಸರಿಯಾಗಿ, ತಿಂಡಿ, ಊಟ, ಚಿಕಿತ್ಸೆ ಕೊಡಿಸದ್ದಕ್ಕೆ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಫೋನ್ ಮಾಡಿದ್ರೂ ಶಾಸಕ, ಅಧಿಕಾರಿಗಳು ಸಮಸ್ಯೆಗೆ ಸ್ಪಂಧಿಸ್ತಿಲ್ಲ. ತಹಶೀಲ್ದಾರ ರವಿ ಕೊರವರ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊಟ, ತಿಂಡಿ, ಚಿಕಿತ್ಸೆ ಕೊಡಿಸಲು ಆಗದಿದ್ರೆ ನಾವು ಸತ್ತರೂ ಪರವಾಗಿಲ್ಲ ನಮ್ಮನ್ನ ಬಿಟ್ಟುಬಿಡಿ ನಾವು ಊರಿಗೆ ಹೋಗುತ್ತೆವೆ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

______

Share this News
error: Content is protected !!