June 18, 2021

ಬಾರಿ ಮಳೆ ಗಾಳಿಗೆ ಪತರುಗುಟ್ಟಿದ ಹಾವೇರಿ: ಇನ್ನು ಮೂರು ದಿನ‌ ಇರುತ್ತೆ ಅಂದ್ರು ಹವಾಮಾನ ಇಲಾಖೆ..!

ಹಾವೇರಿ- ಹಾವೇರಿ ಜಿಲ್ಲೆಯ ಹಲವೆಡೆ ನಿನ್ನೆ ಸಿಡಿಲು, ಗುಡುಗು ಮತ್ತು ಬಿರುಗಾಳಿ ಸಮೇತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಆಲದಕಟ್ಟಿ, ದೇವಿಹೊಸೂರು, ರಾಣೇಬೆನ್ನೂರು ತಾಲ್ಲೂಕು ಮುದೇನೂರು ಮತ್ತು ಹಾವೇರಿ ನಗರ ಸೇರಿದಂತೆ ಹಲವೆಡೆ ಬಾರಿ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದೆ.

ಮುಕ್ಕಾಲು ಗಂಟೆಗೂ ಅಧಿಕ ಮಳೆಯಾಗಿದ್ದು, ಬಿರುಗಾಳಿ, ಸಿಡಿಲು ಮತ್ತು ಗುಡುಗಿಗೆ ಕೆಲವೆಡೆ ಅರಳಿಮರ, ಬೇವಿನಮರಗಳು ಧರೆಗೆ ಉರುಳಿವೆ. ಅಲ್ಲದೆ ಬಿರುಗಾಳಿಯ ಹೊಡೆತಕ್ಕೆ ಮನೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರಿಂದ ನಗರದ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ನಗರದ ರೇಲ್ವೆ ಸ್ಟೇಷನ್ ರೋಡ್, ಸುಭಾಷ್ ಸರ್ಕಲ್ ರೋಡ್, ಹುಕ್ಕೇರಿ ಮಠದ ಹತ್ತಿರ ದೊಡ್ಡ ದೊಡ್ಡ ಮರಗಳು ನೆಲಕ್ಕೆ ಉರುಳಿದ್ದವು. ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ಸ್ವಲ್ಪ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಹಾವೇರಿ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.

Share this News
error: Content is protected !!