June 13, 2021

ಸತ್ತ ಮೂರು ದಿನಕ್ಕೆ ಬಂತು ಕೊರೋನ ಪಾಜಿಟೀವ್ ರಿಪೋರ್ಟ್: ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಇಡೀ ಊರಲ್ಲಿ ಡವ್.. ಡವ್..

ಹಾವೇರಿ- ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅರ್ಭಟ ಮುಂದುವರೆದಿದೆ. ಇದರ ನಡುವೆ ಕೊವೀಡ್ ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು, ಕೊರೋನಾದಿಂದ ಸತ್ತಿಲ್ಲ ಎಂದು ಆರೋಗ್ಯ ಇಲಾಖೆ ಶವ ಹತ್ತಾಂತರ ಮಾಡಿದೆ. ಆರೋಗ್ಯ ಇಲಾಖೆಯ ಈ ಯಡವಟ್ಟಿನಿಂದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಜನರಲ್ಲಿ ಈಗ ಡವ್ ಡವ್ ಶುರುವಾಗಿದೆ.

ಮೇ 10 ರಂದು ಗ್ರಾಮದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಆತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಮೃತದೇಹವನ್ನು ಕೊರೋನಾ ಇಲ್ಲ ಅಂತಾ ಮನೆಯವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಸ್ತಾಂತರ ಮಾಡಿತ್ತು. ಅಂತ್ಯಕ್ರಿಯೆ ಮುಗಿದ ಮೂರು ದಿನಗಳ ನಂತರ ಮೃತನ ವರದಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಮೃತನ ವರದಿ ಕೊರೋನಾ ಪಾಸಿಟಿವ್ ಅಂದಿದ್ದಕ್ಕೆ ಗ್ರಾಮಸ್ಥರಲ್ಲಿ ಈಗ ಆತಂಕ ಶುರುವಾಗಿದೆ.

ಕೊರೋನಾ ಇಲ್ಲವೆಂದು ಮೃತನ ಅಂತ್ಯಕ್ರಿಯೆಯನ್ನು ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ನೆರವೇರಿಸಿದ್ದೇವೆ. ನೀವು ಸರಿಯಾದ ವರದಿ ಯಾಕೆ ನೀಡಿಲ್ಲ. ಕೋವಿಡ್ ಅಂತಾ ಹೇಳಿದ್ದರೆ ನಾವು ಕೊರೋನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡುತ್ತಿದ್ದೇವು ಅಂತಾ ಗ್ರಾಮಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

_____

Share this News
error: Content is protected !!