June 22, 2021

ಬೇರೆಯವರಿಗೆ ಮಾದರಿಯಾದ ಸಿಪಾಯಿ..!

ಹಾವೇರಿ – ವರ್ಷದ ರಜೆಗೆ ಬಂದಿದ್ದ ಸೈನಿಕ ಮನೆಗೆ ಹೋಗದೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ತೋಟದ ಮನೆಯಲ್ಲಿ ಸ್ವಯಂ ಕ್ವಾರೈಂಟನ್ ಆಗಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇರುವ ಶಶಿಧರ ಎಲಿಗಾರ ಎಂಬುವರ ತೋಟದ ಮನೆಯಲ್ಲಿ ಯೋದ ಮಾಲತೇಶ ಕ್ವಾರೈಂಟನ್ ಆಗಿದ್ದಾರೆ.

ನವದೆಹಲಿಯಲ್ಲಿ ಯೋದನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲತೇಶ ತಿಪ್ಪಕ್ಕನವರ 35 ವರ್ಷ ವಯಸ್ಸು ಆಗಿದೆ. ನವದೆಹಲಿಯಿಂದ ಬಂದು ಮನೆಗೆ ತೆರಳದೆ ನೇರವಾಗಿ ತೋಟದ ಮನೆಯಲ್ಲಿ ಹೋಂ‌ ಕ್ವಾರೈಂಟನ್ ಆಗಿ ಯೋದ ಮಾಲತೇಶ ಇತರರಿಗೆ ಮಾದರಿಯಾಗಿದ್ದಾರೆ.

ಕಳೆದ ಎಂಟು ದಿನಗಳಿಂದ ತೋಟದ ಮನೆಯಲ್ಲಿ ಕ್ವಾರೈಂಟನ್ ಆಗಿದ್ದು, ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಮನೆಯ ಸದಸ್ಯರು ಹಾಗೂ ಗ್ರಾಮಸ್ಥರಿಂದ ದೂರವಿದ್ದು ಕ್ವಾರೈಂಟನ್ ಅವಧಿ ಮುಗಿಸುತ್ತಿದ್ದಾರೆ.

Share this News
error: Content is protected !!