June 22, 2021

ಲಾಕ್ಡೌನ್ ಎಫೆಕ್ಟ್: ಸೇವಂತಿಗೆ ಹೂವಿನ ಬೆಳೆ ನಾಶ ಮಾಡಿದ ರೈತ.

ಹಾವೇರಿ- ಕೊರೋನಾ ಅರ್ಭಟ ರಾಜ್ಯದಲ್ಲಿ ನಾಗಲೋಟದಲ್ಲಿ ಮುಂದುವರೆದಿದೆ. ಇದರ ಜೊತೆಗೆ ರಾಜ್ಯದ ಅನ್ನದಾತರ ಸಂಕಷ್ಟಗಳು ಹೆಚ್ಚುತ್ತಿವೆ. ರೈತರು ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ತಾಲ್ಲೂಕು ನಾಗನೂರು ಗ್ರಾಮದ ರೈತನೋರ್ವ ಸರಿಯಾದ ದರ ಸಿಗದ ಹಿನ್ನೆಲೆ ಸೇವಂತಿಗೆ ಹೂವಿನ ಬೆಳೆ ನಾಶ ಮಾಡಿದ್ದಾನೆ. ಗ್ರಾಮದ ರೈತ ಹೋಳಿಯಪ್ಪ ಸಂಗಾಪುರ ಎಂಬುವರು ಒಂದು ಎರಕೆ ಯಲ್ಲಿ ಸೇವಂತಿಗೆ ಹೂವು
ಬೆಳೆದಿದ್ದರು.

ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಸಂಕಷ್ಟ ಎದುರಿಸಿದ ರೈತ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಸೇವಂತಿಗೆ ಹೂವಿನ ಬೆಳೆಯನ್ನು ಸಂಪೂರ್ಣ ನಾಶ ಮಾಡಿದ್ದಾನೆ.

ಸುಮಾರು ೨೦ ರಿಂದ ೩೦ ಸಾವಿರ ಖರ್ಚು ಮಾಡಿ ಸೇವಂತಿಗೆ ಹೂವು ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುತ್ತಿಲ್ಲ. ಕಡಿಮೆ ಬೆಲೆ ಕೇಳುತ್ತಿದ್ದಾರೆ. ಕೆಲವು ಭಾರಿ ಸರಿಯಾದ ಬೆಲೆ ಸಿಗದೆ ಸೇವಂತಿಗೆ ಹೂವು ಹಾಗೆ ಸುರಿದು ಬಂದಿದ್ದೇನೆ. ಅದಕ್ಕೆ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಬೆಳೆ ನಾಶ ಮಾಡುತ್ತಿದ್ದೇನೆ ಅಂತಾನೆ ರೈತರು.

__

Share this News
error: Content is protected !!