June 13, 2021

ಮೇ 21 ರಿಂದ 25ರವರೆಗೆ ಹಾವೇರಿ ಸಂಪೂರ್ಣ ಲಾಕ್ ಡೌನ್, ಟಫ್ ರೂಲ್ಸ್ ಜಾರಿ. ಜಿಲ್ಲಾಧಿಕಾರಿಗಳ ಆದೇಶ..!

ಹಾವೇರಿ – ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೆಲವು ಜಿಲ್ಲೆಗಳು ಸ್ವಯಂ ಲಾಕ್ ಡೌನ್ ಘೋಷಣೆ ಮಾಡಿ ಕಠಿಣ ರೂಲ್ಸ್ ಜಾರಿಗೆ ಮಾಡಿವೆ.

ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯ ಜಿಲ್ಲಾಧಿಕಾರಿಗಳು ಐದು ದಿನಗಳ ಕಾಲ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ಮಾಡಿ ಆದೇಶ ಹೊರಡಿಸಿದ್ದಾರೆ.

ಟಫ್ ರೂಲ್ಸ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದು, ಮೇ 21,ರ‌ ಬೆಳಿಗ್ಗೆ ಆರು ಗಂಟೆಯಿಂದ ಮೇ 25,ರ ಬೆಳಿಗ್ಗೆ ಆರು ಗಂಟೆಯವರೆಗೆ ಟಫ್ ರೂಲ್ಸ್ ಜಾರಿಯಲ್ಲಿ ಇರುತ್ತದೆ.

ಹಾಲು, ಔಷಧಿ, ಆಸ್ಪತ್ರೆ, ಅಂಬ್ಯುಲೆನ್ಸ್, ಪೆಟ್ರೋಲ್ ಪಂಪ್, ಅಗ್ನಿಶಾಮಕ, ಆಕ್ಸಿಜನ್ ಉತ್ಪಾದನಾ ಘಟಕ ಮತ್ತು ಎಟಿಎಂ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಮಾಡಿದ್ದಾರೆ. ಮೇ 23,ರಂದು ಮಾತ್ರ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ತರಕಾರಿ ಮತ್ತು ದಿನಸಿ ಅಂಗಡಿಗಳಿಗೆ ಅವಕಾಶ ನೀಡಿದ್ದು, ಐದು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಟಫ್ ರೂಲ್ಸ್ ಮಾಡಿ ಆದೇಶ ನೀಡಿದ್ದಾರೆ.

Share this News
error: Content is protected !!