June 13, 2021

ಹಾವೇರಿಯಲ್ಲಿ ಮೂರನೇಯ ಅಲೆ..? ವಯಸ್ಕರ ಬೇಜವಬ್ದಾರಿ, ಎರಡೇ ತಿಂಗಳಲ್ಲಿ 300 ಮಕ್ಕಳಿಗೆ ಪಾಸಿಟಿವ್..!

ಹಾವೇರಿ-ಕೊರೊನಾ ಮಹಾಮಾರಿಯು ಮೂರನೇ ಅಲೆಯಲ್ಲಿ ಮಕ್ಕಳನ್ನು ಕಾಡಲಿದೆ ಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಪಾಸಿಟಿವ್‌ ಬಂದಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಒಂದು ಹಾಗೂ ಎರಡನೇ ಅಲೆಯಲ್ಲಿ ಹಿರಿಯ ನಾಗರಿಕರನ್ನು ಟಾರ್ಗೆಟ್‌ ಮಾಡಿದ್ದ ಕೊರೊನಾದ ಮೂರನೇ ಅಲೆಯು ಹಾವೇರಿಯಲ್ಲಿ ಈಗಾಗಲೇ ಆರಂಭವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಜಿಲ್ಲಾ ವೈದ್ಯಾಧಿಕಾರಿ ಡಾ. ಪಿ.ಆರ್‌.ಹಾವನೂರ್‌ರವರು ನೀಡಿದ ಮಾಹಿತಿಯ ಪ್ರಕಾರ 15 ವರ್ಷದೊಳಗಿನ 300ಕ್ಕೂ ಹೆಚ್ಚು ಮಕ್ಕಳಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಅದರಲ್ಲಿ 150ಕ್ಕೂ ಹೆಚ್ಚು ಮಕ್ಕಳು 10ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಸಾಮಾಜಿಕ ಅಂತರವನ್ನು ಕಾಪಾಡಬೇಕೆಂಬ ನಿಯಮವನ್ನು ಮಕ್ಕಳು ಸಾಮಾನ್ಯವಾಗಿ ಪಾಲಿಸುವುದಿಲ್ಲ. ಅನೇಕ ಮಕ್ಕಳು ಸರಿಯಾಗಿ ಮಾಸ್ಕ್‌ ಧರಿಸುವುದಿಲ್ಲ. ಆದ್ದರಿಂದ ಅವರಿಗೆ ವೈರಸ್‌ ತಗಲುವ ಸಾಧ್ಯತೆ ಹೆಚ್ಚು. ಆದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುವುದರಿಂದ, ಕೋವಿಡ್‌ ಬಂದರೂ ಚೇತರಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಹಾವನೂರ್‌ ತಿಳಿಸಿದ್ದಾರೆ.

ಹಾವೇರಿಯ ಶಿಶುತಜ್ಞರೊಬ್ಬರ ಪ್ರಕಾರ, “ಸೋಂಕಿನ ಲಕ್ಷಣಗಳಿರುವ ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಲು ಪೋಷಕರು ನಿರಾಸಕ್ತಿ ತೋರುತ್ತಿದ್ದಾರೆ. ಸೋಂಕಿತರ ಸಂಪರ್ಕದಲ್ಲಿ ಇದ್ದರೆಂಬ ಕಾರಣಕ್ಕೆ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ಇರುವುದು ತಿಳಿಯುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

Share this News
error: Content is protected !!