June 13, 2021

ಜೂನ್ ಅಂತ್ಯದ ವೇಳೆ ಕೊರೋನಾ ಹತೋಟಿ..!

ಹಾವೇರಿ- ತಜ್ಞರ ಪ್ರಕಾರ ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ ಬರಲಿದೆ. ಎರಡನೆ ಅಲೆ ಬಹಳಷ್ಟು ಕಡಿಮೆ ಆಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರು ಹೇಳಿದಂತೆಯೆ ಇಲ್ಲಿಯವರೆಗೆ ನಡೆದಿದೆ ಎ‌ಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ನಾವು ಕೂಡ ಜೂನ್ ಅಂತ್ಯದ ವೇಳೆಗೆ ಎರಡನೆ ಅಲೆ ಕಡಿಮೆ ಆಗುತ್ತೆ ಅಂತಾ ನಂಬಿದ್ದೇವೆ.

ಲಾಕ್ ಡೌನ್ ನಿಂದ ಚೈನ್ ಬ್ರೇಕ್ ಆಗುತ್ತದೆ. ಕಳೆದ ಹನ್ನೆರಡು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಮೇ 24ರವರೆಗೆ ಲಾಕ್ ಡೌನ್ ಇದೆ. ನಾವು, ಸಂಪುಟ ಸಹೋದ್ಯೋಗಿಗಳು ಸೇರಿಕೊಂಡು ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಸಿಎಂ ನಿರ್ದೇಶನ ನೀಡ್ತಾರೆ ಎಂದರು.

ಹಳ್ಳಿಗಳಲ್ಲಿ ಸೋಂಕಿತರಿಗೆ ಹೋಂ ಐಸೋಲೇಶನ್ ಬದಲು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ್ದೇವೆ‌. ಹಳ್ಳಿಗಳಲ್ಲಿನ ಸೋಂಕಿತರಿಗೆ ಮೊದಲ ದಿನದಿಂದಲೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ ಮತ್ತು ಸೋಂಕು ಹರಡುವುದನ್ನ ತಡೆಯಲು ಸಾಧ್ಯವಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದ್ದಾರೆ.

_____

Share this News
error: Content is protected !!