June 13, 2021

ನಡೆದುಕೊಂಡು ಆಸ್ಪತ್ರೆಗೆ ಹೊರಟಿದ್ದ ಬಾಣಂತಿ ಮಗುವಿಗೆ ಡ್ರಾಪ್: ಮಾನವೀಯತೆ ಮೆರೆದ ಪಿ.ಎಸ್.ಐ. ಪ್ರಕಾಶ ನಂದಿ ಮತ್ತು ಸಿಬ್ಬಂದಿ..!

ಹಾವೇರಿ – ಕೊರೋನಾ ಅರ್ಭಟಕ್ಕೆ ಹಾವೇರಿ ಜಿಲ್ಲೆಯಲ್ಲಿ ಎರಡನೆ ದಿನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಅದರೆ ಲಾಕ್ ಡೌನ್ ನಿಂದ ಸಂಪೂರ್ಣ ಬಂದ್ ಆಗಿದ್ದರಿಂದ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಹೊರಟಿದ್ದ ಮಹಿಳೆಗೆ ಡ್ರಾಪ್ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಳಿ ಎರಡು ತಿಂಗಳ‌ ಮಗುವನ್ನು ಎತ್ತಿಕೊಂಡು ಮಹಿಳೆ ನಡೆದುಕೊಂಡು ಹೊರಟಿದ್ದರು. ಉದಯನಗರದಿಂದ ಖಾಸಗಿ ಆಸ್ಪತ್ರೆಗೆ ಮನೆಯಿಂದ ಮೂರು ಕಿ.ಮೀ ದೂರವಿರುವ ಆಸ್ಪತ್ರೆಗೆ ಹೊರಟಿದ್ದರು.

ಹಸುಗೂಸನ್ನು ಎತ್ತಿಕೊಂಡು ಹೋಗುತ್ತಿದ್ದಿದ್ದನ್ನು ಗಮನಿಸಿ ಮಹಿಳೆಯನ್ನು ಪಿಎಸ್ ಐ ಪ್ರಕಾಶ ನಂದಿ ಹಾಗೂ ಸಿಬ್ಬಂದಿಗಳು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಬಿಟ್ಟು ಬಂದಿದ್ದಾರೆ.

ಕಂಪ್ಲೀಟ್ ಲಾಕ್‌ಡೌನ್ ಆಗಿದ್ದರಿಂದ ವಾಹನಗಳ ಓಡಾಟವಿಲ್ಲದ್ದರಿಂದ ಮಹಿಳೆ ನಡೆದುಕೊಂಡು ಹಸುಗೂಸನ್ನು ಎತ್ತಿಕೊಂಡು ಹೊರಟ್ಟಿದ್ದಳು. ಆಸ್ಪತ್ರೆಗೆ ಬಿಟ್ಟು ಬಂದು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

 

_____

Share this News
error: Content is protected !!