June 13, 2021

ಗಡಿ ದುರಗಮ್ಮನೋ..? ಅಥವಾ ವಾಮಾಚಾರವೋ..? ಗ್ರಾಮಸ್ಥರಲ್ಲಿ ಆತಂಕ ತಂದ ಪೂಜೆ..!

ಹಾವೇರಿ- ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಅದರೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಳಿ ರಸ್ತೆ ಪಕ್ಕದ ಮರದ ಕೆಳಗಿರುವ ಪೂಜಾ ಸಾಮಗ್ರಿಗಳನ್ನು ಕಂಡು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಕರ್ಜಗಿ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಟ್ಟಿಗೆಯ ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ, ಎಳೆನೀರು, ನೂರಾರು ಕೈಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನು ಇಟ್ಟು ಹೋಗಿದ್ದಾರೆ.

ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಗಡಿ ದುರಗಮ್ಮನೋ? ಅಥವಾ ಯಾರಾದರೂ ವಾಮಾಚಾರವೋ? ಮಾಡಿದ್ದಾರ ಎಂಬುವುದು ಗೊತ್ತಾಗುತ್ತಿಲ್ಲ.‌ಇದು ಗ್ರಾಮಸ್ಥರಲ್ಲಿ ಆತಂಕವನ್ನು ಉಂಟು‌ಮಾಡಿದೆ.

ಕರ್ಜಗಿ ಗ್ರಾಮದಿಂದ ಮೂರು ಕಿಲೋಮೀಟರ್ ಅಂತರದಲ್ಲಿ ವಸ್ತುಗಳನ್ನು ಇಟ್ಟು ಹೋಗಿದ್ದಾರೆ. ಗಡಿ ದುರಗಮ್ಮದೇವಿ ಆಗಿದ್ದರೆ, ಕಡಿಮೆ ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು.‌ ಈಗ ಹೆಚ್ಚು ಪೂಜಾ ಸಾಮಗ್ರಿಗಳನ್ನು ಇಟ್ಟು ಹೋಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಗ್ರಾಮಸ್ಥರು. ಗ್ರಾಮದ ಹಿರಿಯ ಜೊತೆಗೆ ಮಾತನಾಡಿದ ಪೂಜಾ ಹಾಗೂ ದೇವಿಯನ್ನ ನದಿಯಲ್ಲಿ ಬಿಡಬೇಕು. ಅಥವಾ ನಾವು ಗಡಿಯಲ್ಲಿ ಪೂಜೆ ಮಾಡಿ ಅಲ್ಲಿಯೇ ಮುಚ್ಚಬೇಕು ಅನ್ನೋದನ್ನು ತೀರ್ಮಾನ ಮಾಡುತ್ತೇವೆ ಅಂತಾರೆ ಗ್ರಾಮದ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು.

Share this News
error: Content is protected !!