June 18, 2021

ಅನಗತ್ಯವಾಗಿ ಹೊರಗೆ ಓಡಾಡ್ತಿದ್ದವರಿಗೆ ಬಸ್ಕಿ: ಹಂಸಭಾವಿ ಮಹಿಳಾ ಎಎಸ್ಐ ಯಿಂದ ಡಿಫರೆಂಟ್ ಶಿಕ್ಷೆ..!..!

ಹಾವೇರಿ – ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಎರಡನೆ ಅಲೆ ರಣಕೇಕೆ ಹಾಕುತ್ತಿದೆ.‌ಜನರು ಅಗತ್ಯ ವಸ್ತುಗಳ ಖರೀದಿಸಲು ಬೆಳಗ್ಗೆ ೧೦ ಗಂಟೆಯವರೆಗೆ ಅವಕಾಶ ನೀಡಿದೆ. ಅದರಲ್ಲೂ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.ಅದರೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡ್ತಿದ್ದವರಿಗೆ ಮಹಿಳಾ ಎ.ಎಸ್.ಐ ಬಸ್ಕಿ ಹೊಡೆಸಿ ಪಾಠ ಹೇಳಿದ್ದಾರೆ.

ಚಿಕ್ಕೇರೂರು ಗ್ರಾಮದಲ್ಲಿ ಜನರು ಅನಗತ್ಯವಾಗಿ ಹೊರಗೆ ಓಡಾಡ್ತಿದ್ದವರನ್ನ ತಡೆದು ಕಿವಿ ಹಿಡಿಸಿ ಇಪ್ಪತ್ತೈದು ಬಸ್ಕಿ ಹೊಡೆಸಿ ಮಹಿಳಾ ಎಎಸ್ಐ ಬಿಟ್ಟು ಕಳಿಸಿದ್ದಾರೆ. ಹಂಸಭಾವಿ ಮಹಿಳಾ ಎಎಸ್ಐ ಎಂ.ಎ.ಅಸಾದಿ ಅವರಿಂದ ಡಿಫರೆಂಟ್ ಶಿಕ್ಷೆ ನೀಡಿ, ಕೊರೋನಾ ಎರಡನೆ ಅಲೆ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ. ಅನಗತ್ಯವಾಗಿ ಓಡಾಡುವ ಜನರಿಗೆ ತಕ್ಕ ಪಾಠ ಕಲಿಸಿದ್ದಾರೆ.

____

Share this News
error: Content is protected !!