June 18, 2021

ತುತ್ತು ಅನ್ನ ಉಣ್ಣೋಕೆ, ಬೊಗಸೆ ನೀರು ಕುಡಿಯೋಕೆ, ಅಂಗೈ ಅಗಲ ಜಾಗ ಇಲ್ಲಾ ಹಾಯಾಗಿರೋಕೆ: 70 ವರ್ಷದ ಮುದುಕಿಯ ಕಣ್ಣೀರ ಕಥೆ ಇದು..!

ಹಾವೇರಿ: ಸಾಹಸಸಿಂಹ ವಿಷ್ಣುವರ್ಧನ ಅಭಿನಯದ ಜಿಮ್ಮಿಗಲ್ ಸಿನಿಮಾದಲ್ಲಿರುವ ತುತ್ತು ಅನ್ನ ತಿನ್ನೊಕೆ ಬೊಗಸೆ ನೀರು ಕುಡಿಯೋಕೆ, ಎನ್ನುವ ಹಾಡಿನ ಬದುಕಿನ ರೂಪವನ್ನು ಹೋಲುವ ಹಣ್ಣಾದ ಮುದುಕಿಯೊಬ್ಬಳ ಮನಕಲಕುವ ಘಟನೆ ಇದು.

ಕೊರೊನಾ ವಕ್ಕಿರಿಸಿದ ಬಳಿಕ ಸಮಾಜದಲ್ಲಿ ದಿನಕೊಂದು ಕರುಣಾಜನಕ ಘಟನೆಗಳು ನಡೆಯುತ್ತಲೆ ಇವೆ. ಅದರಲ್ಲೂ ಲಾಕ್ ಡೌನ್ ಆದ ಮೇಲೆ ಹಲವರ ಬದುಕು ಬೀದಿ ಪಾಲಾಗಿದೆ. 70 ವರ್ಷದ ದುರ್ಗವ್ವ ರಸ್ತೆಯ ಬದಿಯಲ್ಲಿ ಅನ್ನ ಬೇಯಿಸುವ ದೃಶ್ಯ ಮನ ಕಲಕುವಂತಿದೆ.

ಹಲವು ವರ್ಷಗಳಿಂದ ಸಂಗೂರು ಬಳಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಈ ಅಜ್ಜಿಗೆ ಅಲ್ಲಿಯೂ ನೆಲೆ ಇಲ್ಲದೆ, ಇದೀಗ ಹಾವೇರಿಯ ಹಾನಗಲ್ ರೋಡ್ ನಲ್ಲಿರುವ ಎಪಿಎಂಸಿ ಮಾರುಕಟ್ಟೆಯ ರಸ್ತೆಯ ಅಂಗಡಿಯ ಬಳಿ ನೆಲೆಸಿದ್ದಾರೆ.

ರಸ್ತೆ ಬದಿ ಒಲೆ ಹಚ್ಚಿ ಅನ್ನ ಮಾಡುವ ದೃಶ್ಯ ನೋಡಿದ ಸ್ಥಳಿಯರು ಅಜ್ಜಿಗೆ, ಅಕ್ಕಿ ಸ್ವಲ್ಪ ಹಣ ನೀಡಿ ಮಾನವಿಯತೆ ಮೆರೆದಿದ್ದಾರೆ.

______

Share this News
error: Content is protected !!