June 13, 2021

“ನಾನೇ ಅವನು”: ಸಾಹುಕಾರನ ಸ್ಪೋಟಕ ಹೇಳಿಕೆ, ಸಿಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್..?

ಬೆಂಗಳೂರು : ರಾಜ್ಯ‌ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿ, ರಾಷ್ಟ್ರಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಸಿ.ಡಿಯಲ್ಲಿರುವುದು ನಾನೇ, ಗೊತ್ತಿಲ್ಲದೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಸ್ವತಃ ರಮೇಶ್ ಜಾರಿಕಿಹೊಳಿ ಎಸ್.ಐ.ಟಿ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.

ವೀಡಿಯೊದಲ್ಲಿ ಇರುವ ಯುವತಿ ನನಗೆ ಪರಿಚಯದವಳು. ಯಾವುದೋ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಪರಿಚಯ ಮಾಡಿಕೊಂಡಿದ್ದಳು. ನನ್ನ ನಂಬರ್ ಗೆ ಆಗಾಗ ಕರೆ ಮಾಡುತ್ತಿದ್ದಳು. ಆಕೆ ನನ್ನನ್ನು ಕೆಲವೊಮ್ಮೆ ಭೇಟಿಯಾಗುತ್ತಿದ್ದಳು. ಮೊದಲ ಭಾರಿಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ಭೇಟಿಯಾಗಿದ್ದಳು ಎಂದಿದ್ದಾರೆ.

ಎಸ್.ಐ.ಟಿ ತನಿಖೆಗೆ ಹಾಜರಾಗದೇ ಉಪಚುನಾವಣೆಯ ನೆಪವೊಡ್ಡಿ ತನಿಖೆಯಿಂದ ತಪ್ಪಸಿಕೊಂಡಿದ್ದ ಮಾಜಿ ಸಚಿವರು, ಇದೀಗ ಸಡನ್ನಾಗಿ ತನಿಖೆಗೆ ಹಾಜರಾಗಿ ನಾನೇ ಅವನು ಎಂದು ಒಪ್ಪಿಕೊಂಡಿರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನು, ಆಕೆಯನ್ನು ನಾನು ಅತ್ಯಾಚಾರ ಮಾಡಿಲ್ಲ. ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಜಾರಕಿಹೊಳಿ ತನಿಖಾಧಿಕಾರಿ ಕವಿತಾ ಎದುರು ಹೇಳಿಕೊಂಡಿರುವುದು ದಾಖಲಾಗಿವೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಈ ಸಿ.ಡಿ ಹೊರ ಬಿದ್ದಾಗ ರಮೇಶ್ ಜಾರಕಿಹೊಳಿ, ಇದನ್ನು ನಕಲಿ ವೀಡಯೊ ಎಂದು ಸಮರ್ಥಿಸಿಕೊಂಡಿದ್ದಲ್ಲದೇ, ನನ್ನನ್ನು ರಾಜಕೀಯ ಕುತಂತ್ರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. “ನಾನವನಲ್ಲ” ಎಂದು ದೂರು ನೀಡಿದ್ದರು.

Share this News
error: Content is protected !!