June 13, 2021

ಕೊವೀಡ್ ಸೋಂಕಿತರಿಗೆ ಯೋಗ: ಟೀಚರ್ ಜ್ಯೋತಿ ಜಂಬಗಿ ಕಾರ್ಯಕ್ಕೆ ಜನ ಮೆಚ್ಚುಗೆ..!

ಹಾವೇರಿ -ದೇಶ್ಯಾದ್ಯಂತ ಕೊರೋನಾ ಮಹಾಮಾರಿ ತನ್ನ ಅರ್ಭಟವನ್ನು ಮುಂದುವರೆಸಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ದೇವರಾಜ ಅರಸು ವಸತಿ ನಿಲಯದ ಕೊವೀಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯತ್ತಿರುವ ಸೋಂಕಿತರಿಗೆ ಯೋಗ ಟೀಚರೊಬ್ಬರು ನಿತ್ಯವು ಯೋಗ ಹೇಳಿಕೊಡುವ ಮೂಲಕ ದೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

 

ಯೋಗ ಟೀಚರ್ ಜ್ಯೋತಿ ಜಂಬಗಿ ಅವರು ರಾಣೇಬೆನ್ನೂರು ನಗರದ ಜನತೆಗೆ ಯೋಗಾಸನದ ತರಬೇತಿ ನೀಡುತ್ತಿದ್ದರು. ಈಗ ಕೊವೀಡ್ ಕೇರ್ ಸೆಂಟರ್ ನಲ್ಲಿ 71 ಜನರಿಗೆ ಧೈರ್ಯ ತುಂಬಿ ಅವರಿಗೆ ದಿನಂಪ್ರತಿ ಮಾಡಬೇಕಾದ ಯೋಗದ ಆಸನಗಳನ್ನು ಕಲಿಸಿಕೊಟ್ಟು, ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.


ಕೊವೀಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ದೂರದಿಂದಲೇ ಸರಳವಾದ ಯೋಗ, ಪ್ರಾಣಾಯಾಮ ಸೇರಿದಂತೆ ಧ್ಯಯಾನ ಮಾಡುವ ಸರಳವಾದ ಆಸನಗಳನ್ನ್ನು ಹೇಳಿ ಜ್ಯೋತಿ ಟೀಚರ್ ಕೊರೋನಾ ಸಮಯದಲ್ಲೂ ಸಹ ತಮ್ಮ ಯೋಗ ಸೇವೆಯನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ನೀಡುತ್ತಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಕಡೆ ಭಯದಿಂದ ಯಾರು ಹೋಗದ ಸ್ಥಿತಿ ಇದೆ. ಅದ್ರೂ ಸೋಂಕಿತರು ಬೇಗ ಗುಣಮುಖರಾಗಲಿ ಎಂದು ಯೋಗ ತರಬೇತಿ ನೀಡಿ ದೈರ್ಯ ಹೇಳುತ್ತಿರುವ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

_______

Share this News
error: Content is protected !!