June 18, 2021

ಆಕ್ಸಿಜನ್ ಬೆಡ್ ಗಾಗಿ ಬಿಸಿಲಲ್ಲೆ ಕಾದು ಕುಳಿತ ಕೊರೋನಾ ಸೋಂಕಿತ..!

ಹಾವೇರಿ- ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಅದರಲ್ಲೂ ಆಕ್ಸಿಜನ್ ಬೆಡ್ ಸಿಗದೆ ಪರದಾಡುವ ಪರಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಇವತ್ತು ಆಕ್ಸಿಜನ್ ಬೆಡ್ ಗಾಗಿ ಬಿಸಿಲಲ್ಲೆ ಕೊರೋನಾ ಸೋಂಕಿತ ಕಾದು ಕುಳಿತ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಸರಕಾರಿ ಆಸ್ಪತ್ರೆಯ ಮುಂದೆ ನಡೆದಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಸೋಂಕಿತ ಬಿಸಿಲಿನಲ್ಲಿಯೇ ಕುಳಿತಿದ್ದಾನೆ. ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮದ 60 ವರ್ಷದ ಸೋಂಕಿತ, ಕಳೆದ ನಾಲ್ಕು ದಿನಗಳ ಹಿಂದೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚನೆ ನೀಡಿದ್ದಾರೆ. ಅದರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಪುಲ್ ಇರೋ ಕಾರಣ ಎರಡ ದಿನಗಳ ಕಾಲ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಈಗಾಗಲೇ 40 ಸಾವಿರ ಖರ್ಚು ‌ಮಾಡಿದ್ದೇವೆ.


ನಾವು ಬಡವರು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನೀಡಿ ಅಂತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದರೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಪುಲ್ ಆಗಿವೆ ಹೋಗಿ ಅಂತಿದ್ದಾರೆ. ಬಡವರು ನಾವು ಏಲ್ಲಿಗೆ ಹೋಗಬೇಕು.ಹೆಚ್ಚು ಖರ್ಚು ಮಾಡುವ ಶಕ್ತಿಯಿಲ್ಲ. ಅದಕ್ಕೆ ಆಸ್ಪತ್ರೆಯ ಹೊರಗೆ ಕಾದು ಕುಳಿತಿದ್ದೇವೆ ಅಂತಿದ್ದಾರೆ ಸೋಂಕಿತನ ಕುಟುಂಬ ಸದಸ್ಯರು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕಿದೆ.

 

______

Share this News
error: Content is protected !!