June 13, 2021

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಟೆಂಟ್ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ..!

ಹಾವೇರಿ – ಕೊರೋನಾ ಅರ್ಭಟ ಹಾವೇರಿ ಜಿಲ್ಲೆಯಲ್ಲಿ ಮುಂದುವರೆದಿದೆ. ಇದರಿಂದ ಕೂಲಿ ಕಾರ್ಮಿಕರು ಹಾಗೂ ಟೆಂಟ್ ನಿವಾಸಿಗಳು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ನ ನವನಗರ ದಲ್ಲಿರುವ 40 ಟೆಂಟ್ ನಿವಾಸಿಗಳಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಹಾನಗಲ್ ನಗರದ ಪುರಸಭೆ ಶುದ್ಧ ನೀರಿನ ಘಟಕದ ಪಕ್ಕದಲ್ಲಿ ಟೆಂಟ್ ಗಳನ್ನ ಹಾಕಿಕೊಂಡು ವಾಸವಾಗಿರುವ 40 ಬಡ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಿದರು.

ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್ ಡೌನ್ ಜಾರಿಗೆ ತಂದಿರುವುದರಿಂದ ಅಂದೇ ದುಡಿದು ಜೀವನ ನಡೆಸುವವರಿಗೆ,ಸಣ್ಣಪುಟ್ಟ ವ್ಯಾಪಾರ ಮಾಡುವ ಸಂಚಾರಿ ವ್ಯಾಪಾರಿಗಳಿಗೆ,ಕಲೆ ಕಸುಬುದಾರರಿಗೆ,ಕಡು ಬಡವರಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವುದನ್ನ ತಿಳಿದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಾಯ ಮಾಡಿದ್ದಾರೆ.

ಅಗತ್ಯ ದಿನಸಿ ವಿತರಣಾ ಕಾರ್ಯಕ್ರಮದಲ್ಲಿ ಹಾನಗಲ್ ಪಿ.ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿ, ತಾಲೂಕಾ ಯೋಜನಾಧಿಕಾರಿಗಳಾದ ರಾಘವೇಂದ್ರ ಪಟ್ಗಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this News
error: Content is protected !!