June 18, 2021

ತಜ್ಞರ ಸಮಿತಿಯ ಸಲಹೆ ಮುಂದಿಟ್ಟುಕೊಂಡು ಮುಂಜಾಗ್ರತೆ ವಹಿಸಿದ್ದರೆ ಹೆಚ್ಚು ಸಾವು ಆಗುತ್ತಿರಲಿಲ್ಲ. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಕಿಡಿ.

ಹಾವೇರಿ – ಸರಕಾರ ಕೊರೊನಾ ಬಗ್ಗೆ ತಜ್ಞರ ಸಮಿತಿಯ ಸಲಹೆ ಮುಂದಿಟ್ಟುಕೊಂಡು ಮುಂಜಾಗ್ರತೆ ವಹಿಸಿದ್ದರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಮರಣದ ಪ್ರಮಾಣ ಜಾಸ್ತಿ ಆಗಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ಮಾನೆ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಕೊರೋನಾ ಪ್ರಾಣ ತೆಗೆದುಕೊಳ್ಳುವ ಕಾಯಿಲೆಯಂತೂ ಇದಲ್ಲ. ಸೌಲಭ್ಯಗಳು ಇರದೇ ಇರೋದಕ್ಕೆ ಅಮಾಯಕರ ಪ್ರಾಣ ಹೋಗುತ್ತಿವೆ. ಸಮರ್ಪಕ ಆಕ್ಸಿಜನ್ ಪೂರೈಕೆ ಇಲ್ಲ, ವೆಂಟಿಲೇಟರ್ ಇದ್ದರೂ ಅದರ‌ ನಿರ್ವಹಣೆ ಇಲ್ಲ. ಜಿಲ್ಲೆಯಲ್ಲಿನ ಎಲ್ಲ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸಿದ್ದರೆ ಬಹುಶಃ ಇಷ್ಟೊಂದು ಸಾವುಗಳು ಸಂಭವಿಸುತ್ತಿರಲಿಲ್ಲ. ಕೇವಲ ಸಚಿವರು ಸಭೆಗಳನ್ನ ಮಾಡಿ ಹೇಳಿ ಹೋಗೋದ್ರಿಂದ ಸಮಸ್ಯೆಗಳು ಪರಿಹಾರ ಆಗೋದಿಲ್ಲ.


ಆರೋಗ್ಯ ಸಚಿವರು ಕೆಲವು ದಿನಗಳ ಹಿಂದೆ ಹಾವೇರಿಗೆ ಬಂದಾಗ ವಾರದಲ್ಲಿ ಅಗತ್ಯ ಸಿಬ್ಬಂದಿ ಒದಗಿಸುತ್ತೇವೆ ಅಂತಾ ಹೇಳಿ ಹೋಗಿದ್ದರು. ಈವರೆಗೂ ವೆಂಟಿಲೇಟರ್ ನಿರ್ವಹಣೆ ಮಾಡೋ ಸಿಬ್ಬಂದಿಗಳ ನೇಮಕ ಆಗಿಲ್ಲ ಎಂದು ಕಿಡಿ ಕಾರಿದರು. ಲಸಿಕೆ ತಗೊಂಡರೆ ಕೊರೊನಾ ಬರೋದಿಲ್ಲ ಅಂತೇನಿಲ್ಲ.ನಾನೂ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೆ, ನನಗೂ ಕೊರೊನಾ ಪಾಸಿಟಿವ್ ಆಗಿತ್ತು. ಲಸಿಕೆ ತಗೊಂಡರೆ ನಮಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ. ಸರಕಾರ ಜಾಗೃತಿ ಮೂಡಿಸುವಲ್ಲಿ, ವಿಶ್ವಾಸ ಮೂಡಿಸುವಲ್ಲಿ‌ ವಿಫಲವಾಗಿದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

_____

Share this News
error: Content is protected !!