June 13, 2021

HAVERI| ವ್ಯಾಕ್ಸಿನ್ ಸಿಗದೆ ಮನೆಗೆ ವಾಪಸ್ ಹೋದ ಸಾರ್ವಜನಿಕರು: ಸರಿಯಾದ ಮಾಹಿತಿ ನೀಡದ ಆರೋಗ್ಯ ಇಲಾಖೆಗೆ ಹಿಡಿಶಾಪ..!

ಹಾವೇರಿ- ಹಾವೇರಿ ಜಿಲ್ಲೆಯ ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಅದರೆ ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರೋ ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನ್ ಸಿಗದೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದು ಜನರು ವಾಪಸ್ ಮನೆಗೆ ಹೋಗುತ್ತಿದ್ದಾರೆ.

ಆರೋಗ್ಯ ಇಲಾಖೆಯಿಂದ ಸರಿಯಾದ ಮಾಹಿತಿ ಸಿಗದಿದ್ದರಿಂದ, ಬೆಳಿಗ್ಗೆಯಿಂದ ನಿಂತು ಇವತ್ತು ಲಸಿಕೆ ಹಾಕೋದು ಬಂದ್ ಇದೆ. ಇವತ್ತು ೧೦೦ ಕೆಇಬಿ ಸಿಬ್ಬಂದಿಗಳಿಗೆ ಲಸಿಕೆ ನೀಡುತ್ತಿದ್ದೇವೆ‌. ನೀವು ನಾಳೆ ಬನ್ನಿ ಅಂತಾ ಹೇಳಿ ಕಳಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಲಸಿಕಾ ಕೇಂದ್ರದ ಮುಂದೆ ನಿಂತು ವಾಕ್ಸಿನ್ ಹಾಕೋ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡದ್ದರಿಂದ ಲಸಿಕಾ ಕೇಂದ್ರದಿಂದ ನೂರಕ್ಕೂ ಅಧಿಕ ಜನರು ವಾಪಸ್ ಮನೆಗೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಾಕ್ಸೀನ್ ಲಸಿಕೆ ಸಂಪೂರ್ಣ ಖಾಲಿಯಾಗಿದ್ದು, ಜಿಲ್ಲೆಗೆ ಕೋವಿಶಿಲ್ಡ್ ೧೨ ಸಾವಿರ ಡೋಸ್ ಬಂದಿದ್ದರು ಸಹ ಜನರಿಗೆ ಸರಿಯಾದ ಮಾಹಿತಿ ಇಲ್ಲದೆ ಲಸಿಕಾ ಕೇಂದ್ರಕ್ಕೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. 45 ವರ್ಷ ಮೇಲ್ಪಟ್ಟ ಜನರಿಗೆ ಹಾಗೂ 18 ವರ್ಷದ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಬೇಕು. ಆರೋಗ್ಯ ಸರಿಯಾದ ಮಾಹಿತಿ ನೀಡದೆ ಜನರನ್ನ್ನು ಲಸಿಕಾ ಕೇಂದ್ರಕ್ಕೆ ಬಂದು ವಾಪಸು ಹೋಗುವಂತೆ ಮಾಡಿದ್ದಾರೆ. ಸರಿಯಾದ ಮಾಹಿತಿ ನೀಡದ ಅರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಡಳಿತಕ್ಕೆ ಜನರು ಹಿಡಿಶಾಪ ಹಾಕಿದರು.
_____

Share this News
error: Content is protected !!