June 13, 2021

HAVERI| ಸಾಮಾಜಿಕ ಅಂತರ ಮರೆತು ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದ ಅನ್ನದಾತರು..!

ಹಾವೇರಿ – ಹಾವೇರಿ ಜಿಲ್ಲೆ ಅಂದರೆ ಅದು ಕೃಷಿ ಪ್ರಧಾನ ಜಿಲ್ಲೆ. ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ, ಕೆಲವು ವಿನಾಯಿತಿ ನೀಡಿ ಟಫ್ ರೂಲ್ಸ್ ಜಾರಿಗೆ ಮಾಡಿದರೂ ಹಾವೇರಿಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಮುಗಿಬಿದ್ದಿದ್ದಾರೆ.

ರೈತ ಸಂಪರ್ಕ ಮುಂದೆ ಸಾಮಾಜಿಕ ಅಂತರ ಮರೆತು ರೈತರು ನಾ ಮುಂದು ತಾ ಮುಂದೆ ಸಾಲು ನಿಂತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಉತ್ತಮ ಮಳೆ ಆಗ್ತಿರೋದರಿಂದ, ಬೆಳಿಗ್ಗೆಯಿಂದಲೆ ಬಿತ್ತನೆ ಬೀಜಕ್ಕಾಗಿ ಕ್ಯೂನಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.

 

ಸಂಪೂರ್ಣವಾಗಿ ಸಾಮಾಜಿಕ ಅಂತರ ಮಾಯಾವಾಗಿದ್ದು, ಶೇಂಗಾ ಮತ್ತು ಸೋಯಾಬಿನ್ ಬಿತ್ತನೆ ಬೀಜ ಖರೀದಿಗೆ ಸಾಮಾಜಿಕ ಅಂತರ ಮರೆತು ಮುಗಿಬಿದ್ದರು, ಸ್ಥಳದಲ್ಲಿ ಯಾವೊಬ್ಬ ಅಧಿಕಾರಿಗಳು ಇಲ್ಲದೆ ರೈತರು ಮಾತ್ರ ಸಾಮಾಜಿಕ ಅಂತರ ಮರೆತು ಬಿತ್ತನೆ ಬೀಜ ಖದೀದಿ ಮಾಡುತ್ತಿದ್ದರು.

_____

Share this News
error: Content is protected !!