June 13, 2021

ಸರಿಯಾಗಿ ಚಿಕಿತ್ಸೆ ದೊರಕದ ಆರೋಪ: ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಪುತ್ರನ ಕ್ಯಾತೆ, ಎಫ್ಐಆರ್ ದಾಖಲು.!

ಹಾವೇರಿ- ಕೊರೋನಾ ಸೋಂಕಿತ ತಂದೆಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಪುತ್ರ , ಕೋವಿಡ್‌ ವಾರ್ಡ್ ಗೆ ಪ್ರವೇಶಿಸಿ ಕರ್ತವ್ಯನಿರತ ವೈಧ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದೆ.

ಸವಣೂರು ತಾಲೂಕು ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ತಮ್ಮ ತಂದೆಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ತಂದೆಯನ್ನ ಡಿಸ್ಚಾರ್ಜ್ ಮಾಡುವಂತೆ ಸೋಂಕಿತನ‌ ಪುತ್ರ ಕ್ಯಾತೆ ಮಾಡಿದ್ದಾನೆ. ಸೋಂಕಿತ ಉಸಿರಾಟದ‌ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಆಗೋದಿಲ್ಲ, ಕೋವಿಡ್ ವಾರ್ಡ್ ಗೆ ಪ್ರವೇಶವಿಲ್ಲ ಅಂದ್ರೂ ವಾರ್ಡ್ ನಲ್ಲಿದ್ದ ವೈದ್ಯರು, ಸಿಬ್ಬಂದಿ ಹಾಗೂ ವೈಧ್ಯಾಧಿಕಾರಿ ಜೊತೆಗೆ ಜಗಳ‌ವಾಡಿದ್ದಾನೆ. ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಚನ್ನವೀರಪ್ಪ ಎಂಬಾತನ ವಿರುದ್ಧ ಈಗ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಶಂಕರಗೌಡ ಹಿರೇಗೌಡ್ರ ದೂರು ದಾಖಲಿಸಿದ್ದಾರೆ. ಮೇ ೨೫ ರಂದು ಈ ಘಟನೆ ನಡೆದಿದ್ದು, ಸೋಂಕಿತನ್ನ ಆಸ್ಪತ್ರೆಯಿಂದ ಹೊರಗೆ ಬಿಡದೇ ಚಿಕಿತ್ಸೆ ಮುಂದುವರೆಸಿದ್ದಾರೆ.

 

_____

Share this News
error: Content is protected !!