June 13, 2021

ಜೂನ್ 30ರವರೆಗೆ ಕೋವಿಡ್ ಕಠಿಣ ನಿಯಮ ಅನುಸರಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ: ಜೂನ್ 5 ರಂದು ರಾಜ್ಯ ಸರಕಾರದ ಲಾಕ್ಡೌನ್ ಅಧಿಕೃತ ಆದೇಶ..?

ರಾಜ್ಯ ಮತ್ತು ದೇಶಾದ್ಯಂತ ಕೊರೋನಾ ಆರ್ಭಟ ಜೋರಾಗಿದೆ. ಇದನ್ನು ಹತ್ತಿಕ್ಕಲು ರಾಜ್ಯ ಸರಕಾರಗಳಿಗೆ ಜೂನ್ 30 ರವರೆಗೆ ಕಠಿಣ ನಿಯಮ ಅನುಸರಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಕೊರೋನ ಎರಡನೇ ಅಲೆಗೆ ಈಗಾಗಲೇ ದೇಶವೇ ತತ್ತರಿಸಿ ಹೋಗುತ್ತಿದ್ದು ರಾಜ್ಯದಲ್ಲೂ ಕೂಡ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚತ್ತಿದೆ. ಹಾಗೂ ಕೋವಿಡ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜೂನ್ 7, ರವರೆಗೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿದೆ.

ಈಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆಯು ಜೂನ್ 30 ರವರೆಗೆ ಕಠಿಣ (ಲಾಕ್ಡೌನ್) ನಿಯಮ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದು, ರಾಜ್ಯ ಸರ್ಕಾರ ಜೂನ್ 5ರಂದು ಲಾಕ್ಡೌನ್ ವಿಸ್ತರಿಸುವ ಬಗ್ಗೆ ತಜ್ಞರ ಸಮಿತಿಯೊಂದಿಗೆ ಮಾತುಕತೆ ನಡೆಸಿ ಅಧಿಕೃತ ನಿರ್ಧಾರ ಪ್ರಕಟಿಸಲಿದೆ.

Share this News
error: Content is protected !!