June 18, 2021

ಕೊರೋನಾ ಜನಕ ಕಥೆ: ಕೋವಿಡ್ ಗೆ ತಾಯಿ ಮಗ ಬಲಿ.!

ಬ್ಯಾಡಗಿ- ಹಾವೇರಿ ಜಿಲ್ಲೆಯಲ್ಲಿ ಕೊರೋನಾ ಅರ್ಭಟ ಮುಂದುವರೆದಿದೆ. ಕೊರೋನಾಕ್ಕೆ ತಾಯಿ ಮಗ ಒಂದೇ ದಿನ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದಿದೆ. ಕೊರೋನಾಕ್ಕೆ ಬಲಿಯಾದ ತಾಯಿಯನ್ನು ಲಲಿತವ್ವ ಬನ್ನಿಹಟ್ಟಿ 50 ವರ್ಷ ಮತ್ತು ನಾಗರಾಜ ಬನ್ನಿಹಟ್ಟಿ 30 ವರ್ಷದ ಮಗ ಎಂದು ಗುರುತಿಸಲಾಗಿದೆ.

ಹಂಸಭಾವಿ ಹೆಸ್ಕಾಂ ಇಲಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಮೇ21ರಂದು ಮಗ ನಾಗರಾಜಗೆ ಕೊರೋನಾ ಸೋಂಕು ಧೃಡಪಟ್ಟಿತ್ತು. ಹಿರೇಕೆರೂರು ಕೋವಿಡ್ ಕೇರ್ ಸೆಂಟರ್ ಚಿಕಿತ್ಸೆ ಪಡೆದು, ನಂತರ ಉಸಿರಾಟದ ಸಮಸ್ಯೆಯಿಂದ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಾಯಿಗೂ ಸೋಂಕು ದೃಢಪಟ್ಟಿತ್ತು. ಹಿರೇಕೆರೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದು, ತಾಯಿಗೂ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ. ಮೇ 28ರ ತಡರಾತ್ರಿ ಮಗ ಮೃತಪಟ್ಟಿದ್ರೆ, ಬೆಳಗಿನ ಜಾವ ತಾಯಿ ಮೃತಪಟ್ಟಿದ್ದಾಳೆ. ಐದು ಜನ ಸದಸ್ಯರಿದ್ದ ಕುಟುಂಬದಲ್ಲಿ ತಾಯಿ ಮತ್ತು ಮಗ ಸಾವನ್ನಪ್ಪಿದ್ದು, ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.

 

_______

Share this News
error: Content is protected !!