June 18, 2021

ಮೀತಿ ಮಿರಿ ಹಬೆ ತೆಗೆದುಕೊಳ್ಳುವ ಅಭ್ಯಾಸ, ಬ್ಲಾಕ್ ಫಂಗಸ್ ದಾಳಿಗೆ ಅವಕಾಶ.

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ದಾಳಿ ಮಾಡುತ್ತಿರುವ ಬ್ಲ್ಯಾಕ್ ಫಂಗಸ್ ಗೆ ಏನು ಕಾರಣ ಎಂಬ ಬಗ್ಗೆ ಹಲವು ಕಾರಣಗಳನ್ನು ನೀಡಲಾಗಿದೆ. ಅದರ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಅದುವೇ ಮಿತಿ ಮೀರಿದ ಹಬೆ ಅಂದರೆ ಸ್ಟೀಮ್ ತೆಗೆದುಕೊಳ್ಳುವ ಅಭ್ಯಾಸ..

ಇದು ಕೂಡ ಬ್ಲ್ಯಾಕ್ ಫಂಗಸ್ ದಾಳಿಗೆ ಅವಕಾಶ ಮಾಡಿಕೊಡುತ್ತಿದೆ. ಎನ್ನುತ್ತಾರೆ ಖ್ಯಾತ ವೈದ್ಯ ದೀಪಕ್ ಹಲ್ದಿಪುರ, ಹೆಚ್ಚು ಬಾರಿ ಸ್ಟೀಮ್ ಮೊರೆ ಹೋದಾಗ ಮೂಗಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಈ ಸಂದರ್ಭದಲ್ಲಿ ಗಾಳಿಯಲ್ಲಿರುವ ಬ್ಲ್ಯಾಕ್ ಫಂಗಸ್ ವೈರಾಣುಗಳು ಮೂಗಿನ ಮೂಲಕ ದೇಹ ಪ್ರವೇಶಿಸುತ್ತವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಗೆ ಔಷಧಿಯ ತೀವ್ರ ಕೊರತೆ ಕೂಡ ಎದುರಾಗಿದೆ.

Share this News
error: Content is protected !!