June 18, 2021

ಅನಗತ್ಯವಾಗಿ ಹೊರಗೆ ಓಡಾಡುವವರಿಗೆ ಇವತ್ತು ಕಾದಿತ್ತು ಹಬ್ಬ. ಅಂತಾದ್ದು ಏನು ಮಾಡಿದ್ರು.!?

ಹಾವೇರಿ – ಲಾಕ್ ಡೌನ್ ನಡುವೆಯೂ ಅನಗತ್ಯವಾಗಿ ಹೊರಗೆ ಓಡಾಡೋರಿಗೆ ಬೈಕ್ ತಳ್ಳಿಕೊಂಡು ಹೋಗುವ ಶಿಕ್ಷೆ ನೀಡಿದ ಘಟನೆ ಹಾವೇರಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಹಾವೇರಿ ನಗರದಲ್ಲಿ ಅನಗತ್ಯ ಹೊರಗೆ ಓಡಾಡುವ ಬೈಕ್ ಸವಾರರಿಗೆ ಡಿಫರೆಂಟ್ ಶಿಕ್ಷೆ ನೀಡಿ ಕೊರೋನಾ ಪಾಠ ಹೇಳಿದ್ದಾರೆ.

ಸಿದ್ದಪ್ಪ ವೃತ್ತದಿಂದ ಸಂಚಾರಿ ಪೊಲೀಸ್ ಠಾಣೆವರೆಗೆ ಬೈಕ್ ತಳ್ಳಿಕೊಂಡು ಹೋಗೋ ಶಿಕ್ಷೆ ನೀಡಿದ್ದು, ಅನಗತ್ಯವಾಗಿ ಹೊರಗೆ ಓಡಾಡುವವರ ಬೈಕ್ ತಡೆದು ಬೈಕ್ ಕೀ ಕಸಿದುಕೊಂಡು ಬೈಕ್ ತಳ್ಳಿಕೊಂಡು ಹೋಗುವ ಶಿಕ್ಷೆ ನೀಡಿದ್ದಾರೆ.

ಪೊಲೀಸ್ ಠಾಣೆವರೆಗೆ ಬೈಕ್ ತಳ್ಳಿಕೊಂಡು ಹೋದ್ಮೇಲೆ ದಂಡ ಕಟ್ಟಿಸಿಕೊಂಡು ಹೊರಗೆ ಓಡಾಡದಂತೆ ತಾಕೀತು ಮಾಡಿ ಪೊಲೀಸರು ಮನೆಗೆ ಕಳಿಸಿದರು. ಸಂಚಾರಿ ಠಾಣೆ ಪಿಎಸ್ಐ ಬಸವರಾಜ ಬೆಟಗೇರಿ ನೇತೃತ್ವದಲ್ಲಿ ಪೊಲೀಸರಿಂದ ಡಿಫರೆಂಟ್ ಶಿಕ್ಷೆ ನೀಡಿ ಅನಗತ್ಯವಾಗಿ ಓಡಾಡುವ ಜನರಿಗೆ ತಕ್ಕ ಪಾಠ ಕಲಿಸಿದ್ದಾರೆ.

______

Share this News
error: Content is protected !!