June 22, 2021

ಏರಪೋರ್ಸ್ “ಪೈಟರ್ ಪೈಲಟ್” ಆಗಿ ಆಯ್ಕೆಯಾದ “ಹಾವೇರಿ ಹೈದ” ಪುನೀತ ಬಣಕಾರ.!

ಹಿರೇಕೆರೂರು: ಅಪ್ಪಟ ಹಳ್ಳಿಯ ಪ್ರತಿಭಾವಂತ ಯುವಕನೊಬ್ಬ ಏರ್‌ಪೋರ್ಸ್‌ ಫೈಟರ್ ಪೈಲಟ್ ಹುದ್ದೆಗೆ ನೇಮಕಗೊಳ್ಳುವ ಮೂಲಕ ಹಳ್ಳಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪುನೀತ ಬಣಕಾರ ಈ ಸಾಧನೆ ಮಾಡಿದ್ದಾರೆ. 2019ರಲ್ಲಿ ಯುಪಿಎಸ್‌ಸಿ(ನ್ಯಾಶನಲ್ ಡಿಫೆನ್ ಆಕಾಡೆಮಿ) ಪರೀಕ್ಷೆಯ 140ನೇ ಬ್ಯಾಚಿನಲ್ಲಿ ತೇರ್ಗಡೆ ಹೊಂದಿ ಏರ್‌ಪೋರ್ಸ್‌ ಪೈಲೆಟ್ ಹುದ್ದೆಗೆ ಆಯ್ಕೆಯಾಗಿದ್ದರು.

ಮಹಾರಾಷ್ಟ್ರದ ಪುಣೆಯ ಕಡಕ ವಾಸ್ತಾದಲ್ಲಿ ಪೋರ್ಸ್ ಪೈಲಟ್ 3 ವರ್ಷಗಳ ತರಬೇತಿ ಪಡೆದಿದ್ದಾರೆ. ಮೇ 29ರಂದು ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ಮತ್ತೊಮ್ಮೆ ತೇರ್ಗಡೆ ಹೊಂದಿದ್ದು ವಿಶೇಷ ತರಬೇತಿ ಪಡೆಯಲು ಹೈದರಾಬಾದ್‌ಗೆ ತೆರಳಿದ್ದಾರೆ.

Share this News
error: Content is protected !!