June 22, 2021

ಲಾಕ್ಡೌನ್ ಎಫೆಕ್ಟ್: ಸೊರಗಿದ ಮದುವೆ ಸಂಭ್ರಮ, ಜಮೀನಿನಲ್ಲೆ ಬಾಡುತ್ತಿರುವ ಸುಗಂಧ ರಾಜ.

ಶಿಗ್ಗಾಂವ್- ಕೊರೋನಾ ಆರ್ಭಟ ರಾಜ್ಯದಲ್ಲಿ ಮುಂದುವರೆದಿದೆ. ಇದರಿಂದ ಅನ್ನದಾತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಗಂಧ ಹೂವು ಬೆಳೆದು ಮಾರಾಟ ಆಗದೆ ಹಾಗೆ ಉಳಿದಿದ್ದಕ್ಕೆ ರೈತ ಕಂಗಾಲಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಶಿವಾನಂದ ಗುಡ್ಡಣ್ಣವರ ಎಂಬ ರೈತ ಸುಗಂಧ ಹೂವಿನ ಬೆಳೆ ಬೆಳೆದಿದ್ದಾನೆ.

ಒಂದು ಎರಕೆ ಜಮೀನಿನಲ್ಲಿ ೮೦ ಸಾವಿರ ರುಪಾಯಿ ಖರ್ಚು ಮಾಡಿ ಸುಗಂಧ ಹೂವು ಬೆಳೆದಿದ್ದು, ಲಾಕ್ ಡೌನ್ ಆಗಿದ್ದರಿಂದ ಹೂವು ಮಾರಾಟವಾಗದೆ ಹಾಗೆ ಉಳಿದಿದ್ದಕ್ಕೆ ರೈತ ಕಂಗಾಲಾಗಿದ್ದಾನೆ. ಮದುವೆ ಮತ್ತಿತರೆ ಕಾರ್ಯಕ್ರಮಗಳು ಸಂಪೂರ್ಣ ಬಂದ್ ಆಗಿದ್ದಕ್ಕೆ ಮಾರಾಟ ಆಗದೆ ಜಮೀನಿನಲ್ಲೇ ಹೂವು ಬಾಡಿ ಹೋಗುತ್ತಿದೆ. ಈಗ ಸಂಪೂರ್ಣ ನಾಶ ಮಾಡಿ ಬೇರೆ ಬೆಳೆ ಬೆಳೆಯ ಬೇಕೆಂದರೆ, ಮತ್ತೆ ಸಾಲ‌ ಮಾಡುವ ಪರಿಸ್ಥಿತಿ ಬಂದಿದೆ ಅಂತಾ ತನ್ನ ನೋವು ವ್ಯಕ್ತಪಡಿಸಿದ್ದಾನೆ.

________

Share this News
error: Content is protected !!