June 13, 2021

ಪತ್ರಕರ್ತ ಶಿವಕುಮಾರ ಓಲೇಕಾರ ಮೇಲಿನ ಎಫ್‌ಐಆರ್ ರದ್ದುಪಡಿಸಿ, ಪ್ರಕರಣದ ತನಿಖೆಗೆ ಆಗ್ರಹಿಸಿ ಸಿ.ಎಂಗೆ ಮನವಿ.

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಈಟಿವಿ ಭಾರತ್ ಸುದ್ದಿ ಚಾನೆಲನ ವರದಿಗಾರ ಶಿವಕುಮಾರ ಓಲೇಕಾರ ಅವರು ರಾಣೇಬೆನ್ನೂರ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ವರದಿ ಪ್ರಸಾರ ಮಾಡಿದ ಕಾರಣಕ್ಕೆ ರಾಣೆಬೆನ್ನೂರು ತಾಲೂಕಾ ವೈದ್ಯಾಧಿಕಾರಿ ಡಾ. ಪರಮೇಶ್ವರ ಆರ್.ಸಿ ಅವರು ಶಿವಕುಮಾರ ಅವರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಎಫ್‌ಐಆರ್ ರದ್ದು ಪಡಿಸಲು ಆಗ್ರಹಿಸಿ ಸೋಮವಾರ  ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಲತೇಶ ಅಂಗೂರ, ಪ್ರಭುಗೌಡ ಪಾಟೀಲ, ಶಿವಕುಮಾರ ಹುಬ್ಬಳ್ಳಿ, ಪ್ರಶಾಂತ ಮರೆಯಮ್ಮನವರ, ಫಕ್ಕಿರಯ್ಯ ಗಣಾಚಾರಿ, ವಿರೇಶ ಬಾರ್ಕಿ, ವಾಗೀಶ ಪಾಟೀಲ, ರಮೇಶ, ರಾಜು ಎಮ್ ಜಿ, ನಾಗಾರಾಜ, ಪ್ರಶಾಂತ ಡೂಗನವರ ಸೇರಿದಂತೆ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಸ್ನೇಹಿತರು ಉಪಸ್ಥಿತರಿದ್ದರು.

ಹಿನ್ನೆಲೆ: ಪತ್ರಕರ್ತ ಶಿವಕುಮಾರ ಓಲೇಕಾರರವರು ಅಕ್ರಮವಾಗಿ ರಾಣೇಬೆನ್ನೂರು ತಾಲೂಕು ಆಸ್ಪತ್ರೆಗೆ ಪ್ರವೇಶ ಮಾಡಿ ವಿಡಿಯೋ ಚಿತ್ರಿಕರಣ ಮಾಡಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ, ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ 90/2021 ಕಲಂ; 353,504, ಸಹಕಲಂ: 14 ಬಿಪಿಸಿ ಐಪಿ, ಮತ್ತು ಕಲಂ; 5(4) ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ರಾಣೇಬೆನ್ನೂರು ಶಹರದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಪರಮೇಶ್ವರಪ್ಪ ಆರ್.ಸಿ ಅವರು ಮೇ 29ರಂದು ದೂರು ದಾಖಲಿಸಿದ್ದಾರೆ.

Share this News
error: Content is protected !!