June 18, 2021

ಜೂನ್ ೭ ರಿಂದ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವುದು ಒಳ್ಳೇಯದು. – ಕೃಷಿ ಸಚಿವ ಬಿ.ಸಿ. ಪಾಟೀಲ.!

ರಟ್ಟಿಹಳ್ಳಿ,ಜೂ.2: ಜೂನ್ ೭ ರಿಂದ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವುದು ಒಳ್ಳೆಯದು. ಇದು ನನ್ನ ವಯಕ್ತಿಕ ಅಭಿಪ್ರಾಯ. ಕೊಪ್ಪಳ, ಹಿರೇಕೆರೂರು ಸೇರಿದಂತೆ ಹಲವೆಡೆ ಓಡಾಡಿದ್ದೇನೆ. ಹಿರೇಕರೂರಲ್ಲಿ ಡೆತ್ ರೇಟ್ ಜಾಸ್ತಿ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು ಜೂನ್ ೭ ರಿಂದ ಇನ್ನೊಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡೋದು ಒಳ್ಳೆಯದು ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೊರೊನಾ ಟೈಮನಲ್ಲಿ ರಾಜಕೀಯ ಮಾಡಲು ಹೊರಟಿರೋದು ಸರಿಯಲ್ಲ. ಇದು ರಾಜಕಾರಣ ಮಾಡೋ ಸಮಯವಲ್ಲ. ರೋಮ್ ಹೊತ್ತಿ ಉರಿವಾಗ ಯಾರೋ ಪಿಟೀಲು ಬಾರಿಸಿದಂತೆ ಡಿಕೆಶಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ನಾನು ರೀಲಲ್ಲಿ ಹೀರೋ, ರೀಯಲ್ ಆಗಿ ಹೀರೋ ಅಂತಾ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ. ನಾನೂ ಅದನ್ನೆ ಹೇಳುತ್ತೇನೆ. ಇದು ರಾಜಕಾರಣದ ಬಗ್ಗೆ ಮಾತನಾಡುವ ಸಮಯವಲ್ಲ. ಅದನ್ನು ನೋಡಿಕೊಳ್ಳೋಕೆ ರಾಜ್ಯದ ನಾಯಕರಿದ್ದಾರೆ. ಕೊರೊನಾದಿಂದ ಜನರು ಸಾಯುತ್ತಿದ್ದಾರೆ. ಬ್ಲಾಕ್ ಫಂಗಸ್ ಹರಡುತ್ತಿದೆ. ಈ ಟೈಮ್ ನಲ್ಲಿ ರಾಜಕಾರಣ ಮಾಡುವುದು ಸರಿ ಅಲ್ಲ. ಈ ಟೈಮ್ ನಲ್ಲೂ ರಾಜಕಾರಣ ಮಾಡೋರು ಅವರದ್ದು ಅವರೆ ತಿಳ್ಕೋಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

 

_______

Share this News
error: Content is protected !!