June 18, 2021

ಅನ್ನದಾತನ ಅಂತಃಕರಣ: ಜಮೀನು ಅಡವಿಟ್ಟು, ದಿನಸಿ ಕಿಟ್ ವಿತರಿಸಿದ ರೈತ.!

ಲಕ್ಷ್ಮೇಶ್ವರ: ತಾನೇ ಕಷ್ಟದಲ್ಲಿರುವ ಸಂದರ್ಭದಲ್ಲಿ ತಾಲೂಕಿನ ಕುಂದ್ರಳ್ಳಿ ಗ್ರಾಮದ ಯುವ ರೈತನೋರ್ವ ಜಮೀನನ್ನು ಅಡವಿಟ್ಟು ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾನೆ. ಲಕ್ಷ್ಮೀಶ್ವರ ತಾಲೂಕಿನ ಕುದ್ರಳ್ಳಿ ಗ್ರಾಮದ ರಮೇಶ್ ಮುಂದಿನಮನಿ ತನ್ನ ಎರಡು ಎಕರೆ ಜಮೀನಿನನ್ನೇ ಅಡವಿಟ್ಟು ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಜೀವನಾವಶ್ಯಕ ವಸ್ತುಗಳ ಕಿಟ್‌ಗಳನ್ನು ವಿತರಿಸುವ ಮೂಲಕ ಸಹಾಯ ಮಾಡಿದ್ದಾನೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ರಮೇಶ್ ಮುಂದಿನ ಮನೆ ಎರಡು ಎಕರೆ ಜಮೀನನ್ನು 80 ಸಾವಿರಕ್ಕೆ ಅಡವಿಟ್ಟು ಅದರಲ್ಲಿನ 40 ಸಾವಿರವನ್ನು ಗ್ರಾಮದ ಬಡವರು, ನಿರ್ಗತಿಕರಿಗೆ, ವಿಧವೆಯರು, ಹಾಗೂ ಅಂಗವಿಕಲರಿಗೆ ಸದ್ದಿಲ್ಲದೆ 200 ಕಿಟ್‌ಗಳನ್ನು ವಿತರಿಸಿ ಹಸಿದವರ ನೆರವಿಗೆ ಧಾವಿಸುವ ಮೂಲಕ ಸೇವೆ ಮಾಡಿದ್ದನೆ. ಅವರ ಈ ಕಾರ್ಯವನ್ನು ಎಲ್ಲರೂ ಮೆಚ್ಚಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಮುಂದಿನಮನಿ ತಾನೂ ಕೂಡ ಬಡತನ, ಹಸಿವು ಅನುಭವಿಸಿದ್ದು ಇಂತಹ ಸಂಕಷ್ಟದ ಸಂದರ್ಭದಲ್ಲಿ ನೊಂದವರ ನೋವು ತಿಳಿದು ಅಲ್ಪ ಸೇವೆ ಮಾಡಿದ್ದೇನೆಂದು ತಿಳಿಸಿದ್ದಾರೆ.

ಇದೀಗ ರೈತ ರಮೇಶ ಮುಂದಿನಮನಿಯ ಸೇವೆ ಎಲ್ಲಡೆ ಪ್ರಶಂಸಿಲ್ಪಡುತ್ತಿದೆ. ಬಟ್ಟೂರು ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜ್ ಪಾಟೀಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ರಮೇಶ್‌ನ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.

Share this News
error: Content is protected !!