June 13, 2021

ಮುಖ್ಯಮಂತ್ರಿಗಳಿಂದ 500 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೊಷಣೆ.!

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿರುವ ಪ್ರಮುಖ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಿಎಂ ಅವರು ಇಂದು ಎರಡನೇ ಬಾರಿಗೆ 500 ಕೋಟಿ ರೂಪಾಯಿ ವೆಚ್ಚದ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಿದರು.

500 ಕೋಟಿ ರೂ. ವೆಚ್ಚದ 2ನೇ ಪ್ಯಾಕೇಜ್ ಘೋಷಿಸಿದ ಸಿಎಂ

• ಪವರ್ ಲೂಮ್ ನೇಕಾರರಿಗೆ ತಲಾ 3 ಸಾವಿರ ಪರಿಹಾರ, 59 ಸಾವಿರದ ನೇಕಾರರಿಗೆ ಇದರ ಲಾಭ ಸಿಗಲಿದೆ. ಇದಕ್ಕಾಗಿ ಒಟ್ಟು 35 ಕೋಟಿ ರೂಪಾಯಿ << ಮೀಸಲಿಡಲಾಗಿದೆ

ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರಿಗೆ ತಲಾ 1 3 ಸಾವಿರ ಪರಿಹಾರ

• ಆಶಾ ಕಾರ್ಯಕರ್ತರಿಗೆ 3 ಸಾವಿರ ರೂ. ಪರಿಹಾರ

• ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಪರಿಹಾರ

ಮೀನುಗಾರರಿಗೆ ತಲಾ 3 ಸಾವಿರ ಪರಿಹಾರ ಘೋಷಣೆ

• ಆಶಾ ಕಾರ್ಯಕರ್ತೆಯರಿಗೆ 1 3 ಸಾವಿರ ಪರಿಹಾರ • ಮುಜರಾಯಿ ದೇಗುಲದ ಅರ್ಚಕರು, ನೌಕರರಿಗೆ 13 ಸಾವಿರ

ನ್ಯಾಯವಾದಿಗಳ ಸಂಘಕ್ಕೆ 15 ಕೋಟಿ ಪರಿಹಾರ

ಮಗ್ಗಗಳ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಪರಿಹಾರ

ಸಣ್ಣ ಕೈಗಾರಿಕೆಗಳ ವಿದ್ಯುತ್ ಶುಲ್ಕ ಪಾವತಿಯಿಂದ ವಿನಾಯಿತಿ

• ಅನುದಾನ ರಹಿತ ಶಿಕ್ಷಕರಿಗೆ ತಲಾ 75 ಸಾವಿರ

Share this News
error: Content is protected !!