June 13, 2021

ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ನಿರ್ಧಾಕ್ಷಿಣ್ಯ ಕ್ರಮ; ನೂರು ರೂಪಾಯಿ ಉಳಿಸುವುದಕ್ಕಾಗಿ ಕಳಪೆ ಬೀಜ ತೆಗೆದುಕೊಂಡರೆ ಸರಕಾರ ಜವಬ್ದಾರಿಯಲ್ಲ.!

ಹಾವೇರಿ- ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂಥವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದೆ. ಕಳೆದ ವರ್ಷವೂ ರಾಜ್ಯದ ಹಲವೆಡೆ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರದ ಮಾರಾಟಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈಗಾಗಲೆ ರಾಜ್ಯದ ಬೀದರ, ಕೊಪ್ಪಳ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ದಾಳಿ ಮಾಡಿ ಕಳಪೆ ಬೀಜ ಮತ್ತು ಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ನಾವು ಹಿಡಿತಾನೆ ಇರ್ತೇವೆ, ಆದ್ರೂ ಕಳ್ಳರು ಇರ್ತಾನೆ ಇರ್ತಾರೆ. ಕಳ್ಳತನವನ್ನು ಕಂಟ್ರೋಲ್ ಮಾಡುವ ಕೆಲಸ‌ ಮಾಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳಪೆ ಬೀಜದ ಮಾರಾಟ ಅಷ್ಟಾಗಿ ನಡಿತಿಲ್ಲ. ರೈತ ಸಂಪರ್ಕ ಕೇಂದ್ರ ಮತ್ತು ಅಧೀಕೃತ ಅಂಗಡಿಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡಬೇಕು. ಐವತ್ತು, ನೂರು ರುಪಾಯಿ ಉಳಿಯುತ್ತೆ ಅಂತಾ ರೈತರು ಎಲ್ಲೆಲ್ಲೋ ಬಿತ್ತನೆ ಬೀಜ ತಗೊಂಡ್ರೆ ಅದಕ್ಕೆ ಸರಕಾರ ಜವಾಬ್ದಾರಿ ಆಗೋದಿಲ್ಲ.

ಚೀನಾದಿಂದ ಬಿತ್ತನೆ ಬೀಜದ ಪ್ಯಾಕೇಟ್ ಗಳು ರೈತರ ಮನೆಗೆ ಬೀಜ ಬಂದರೆ ಯಾವುದೇ ರೀತಿಯ ಬಿತ್ತನೆ ಬೀಜದ ಪ್ಯಾಕೇಟ್ ಗಳು ರೈತರ ಮನೆಗೆ ಬಂದರೆ ಅವುಗಳನ್ನು ಬಿತ್ತನೆ ಮಾಡಬಾರದು. ಇದಕ್ಕೆ ರೈತರು ಕಿವಿಗೊಡಬಾರದು. ಕಳೆದ ವರ್ಷ ಈ ರೀತಿ ಕಂಡು ಬಂದಿತ್ತು, ಈ ವರ್ಷ ಚೀನಾ ಬೀಜಗಳು ಬಂದ ಉದಾಹರಣೆಗಳು ನಡೆದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

 

_____

Share this News
error: Content is protected !!