June 13, 2021

ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ; ಸೋಂಕಿತರ ಕಾಳಜಿಗೆ ಟೊಂಕ‌ಕಟ್ಟಿ ನಿಂತ ರೇಣುಕಾಚಾರ್ಯ.!

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಎಮ್.ಪಿ. ರೇಣುಕಾಚಾರ್ಯ ವಾಸ್ತವ್ಯ ಮಾಡಿದ್ದಾರೆ. ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಶಾಸಕ ಎಂ.ಪಿ. ರೇಣುಕಾಚಾರ್ಯ ಕೊರೊನಾ ಸೋಂಕಿತರ ಆರೋಗ್ಯ ಕಾಳಜಿಗೆ ವಹಿಸಲು ಶಕ್ತಿ ಮೀರಿ ಮುಂದಾಗಿದ್ದಾರೆ.

ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನ ಪ್ರತ್ಯೇಕ ಕೋಣೆಯಲ್ಲಿ ರೇಣುಕಾಚಾರ್ಯ ವಾತ್ಸವ್ಯ ಹೂಡಿದ್ದಾರೆ. ಇದೇ ಸಂದರ್ಭದಲ್ಲಿ ಸೋಂಕಿತರಿಗಾಗಿ ರಸಮಂಜರಿ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಂಡಿದ್ದರು.

ಕೋವಿಡ್ ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬುವ ಸಲುವಾಗಿ ಮೂರು ದಿನಗಳ ಕಾಲ ಕೋವಿಡ್ ಸೆಂಟರ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರತಿದಿನ ಬೆಳಗ್ಗೆ ಯೋಗಾಭ್ಯಾಸ ಸಹ ಮಾಡಿಸಲಿದ್ದಾರೆ ಎನ್ನಲಾಗಿದೆ.

______

Share this News
error: Content is protected !!