June 22, 2021

HAVERI | ನರೇಗಾ ಯೋಜನೆಯಡಿ ರೈತ ಕ್ರಿಯಾಯೋಜನೆ

ಹಾವೇರಿ- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, 2021-22ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವುದರ ಜೊತೆಗೆ “ರೈತ ಕ್ರಿಯಾ ಯೋಜನೆ ಅಳವಡಿಸಲು ಫೆಬ್ರುವರಿ 15 ರಿಂದ ಮೇ 20ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ “ಕಾಮಗಾರಿಗಳ ಬೇಡಿಕೆ ಪೆಟ್ಟಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

ಜಿಲ್ಲೆಯ 223 ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಪಡೆಯಲು ಅನುಕೂಲವಾಗುವಂತೆ “ರೈತರ ಕ್ರಿಯಾ ಯೋಜನೆ ಅಂತಾ ಪೆಟ್ಟಿಗೆ ಮೇಲೆ ಬರೆದು ಪೆಟ್ಟಿಗೆಯನ್ನು ಗ್ರಾಮ ಪಂಚಾಯತಿಯಲ್ಲಿ ಇಡಲಾಗುತ್ತಿದೆ. ರೈತರ ತಮ್ಮ ಕಾಮಗಾರಿಗಳ ವಿವರ ಮತ್ತು ಸ್ವ-ವಿವರಗಳನ್ನು ಬರೆದು ಪಟ್ಟಿಗೆಯಲ್ಲಿ ಹಾಕಬೇಕು.

ವೈಯಕ್ತಿಕ ಕಾಮಗಾರಿಗಳ ಪಟ್ಟಿಯನ್ನು ಸಹ ಪೆಟ್ಟಿಗೆ ಪಕ್ಕದಲ್ಲಿ ಲಭ್ಯವಾಗುವಂತೆ ಕರ ಪತ್ರ ಮತ್ತು ಕೈಪಿಡಿಗಳನ್ನು ಸಹ ಒದಗಿಸಲಾಗುತ್ತಿದ್ದು, ರೂ.2.50 ಲಕ್ಷದ ವರೆಗೆ ನೆರವು ನೀಡಲಾಗುವುದು. ಈ ಸದಾವಕಾಶವನ್ನು ರೈತರು ಸದುಪಯೋಗ ಪಡಿಸಿಕೊಂಡು ತಮಗೆ ಬೇಕಾದ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು ಹಾಗೂ ತಮ್ಮ ಕುಟುಂಬದ ಆದಾಯವನ್ನು ಸಹ ಹೆಚ್ಚಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅವರು ತಿಳಿಸಿದ್ದಾರೆ.

Share this News
error: Content is protected !!