June 18, 2021

ಪ್ರಚಾರ ಬಯಸದೇ ಜಿಲ್ಲೆಯ ಸೋಂಕಿತರಿಗಾಗಿ ಬರೊಬ್ಬರಿ 50ಲಕ್ಷ ರೂಪಾಯಿ ಮೊತ್ತದ ಔಷಧಿ ನೀಡಿದ ದಾನಿ.!

ಹಾವೇರಿ: ಎರಡನೆ ಅಲೆಯ ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಅನೇಕ ಸಾವು-ನೋವುಗಳಾಗಿವೆ. ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ನೆರವಾಗಲಿ ಎಂದು ಹೆಸರು ಬಯಸದ ದಾನಿಯೊಬ್ಬರು ಅಂದಾಜು ಐವತ್ತು ಲಕ್ಷ ಮೊತ್ತದ ಇಮ್ಯನಿಟಿ ಬೂಸ್ಟರ್ ಸೇರಿದಂತೆ ಕೋವಿಡ್ ಔಷಧಿಗಳನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರಿಗೆ ಹಸ್ತಾಂತರಿಸಿದ್ದಾರೆ.

ಪೇನ್ ಕಿಲ್ಲರ್, ಇಮ್ಯುನಿಟಿ ಬೂಸ್ಟರ್, ಸೋಂಕಿತ ರೋಗಿಗಳಿಗೆ ಅತ್ಯವಶ್ಯವಿರುವ ಟಾಬ್ಲೆಟ್ ಗಳು, ಮತ್ತು ಸ್ಟೆರಾಯಿಡ್ ಸೇರಿದಂತೆ ಕೋವಿಡ್ ಸೆಂಟರ್ ಗೆ ಬೇಕಾದ ಔಷಧಿಗಳಿವೆ. ಹೆಸರು ಹೇಳಲು ಬಯಸದ ದಾನಿಗಳು ನೀಡಿರುವ ಕೋವಿಡ್ ಔಷಧಿಗಳಲ್ಲಿ ಅಪರೂಪದ ಜಿಲ್ಲೆಯಲ್ಲಿ ಇರದೇ ಇರುವವಂತಹ ಔಷಧಿಗಳಿವೆ. ಇವುಗಳ ಜೊತೆಗೆ ಪೇಸ್ ಶಿಲ್ಡ್ ಮತ್ತು ಮೂರು ಪದರಿನ ಮಾಸ್ಕ್ ಗಳನ್ನು ಕಳಿಸಿದ್ದಾರೆ.‌

ಹೆಸರು ಬಹಿರಂಗ ಪಡಿಸದೇ ಕೋವಿಡ್ ಸಂಕಷ್ಟದಲ್ಲಿ ಲಕ್ಷಾಂತರ ರೂಪಾಯಿಗಳ ಔಷಧಿಗಳನ್ನು ನೀಡಿ, ಜಿಲ್ಲಾಡಳಿತ ದೊಂದಿಗೆ ಕೈ ಜೊಡಿಸಿದ ದಾನಿಗಳಿಗೆ ಜಿಲ್ಲಾಧಿಕಾರಿಗಳಾದ ಸಂಜಯ್ ಶೆಟ್ಟೆಣ್ಣನವರ, ಹಾಗೂ ಜಿಲ್ಲಾ ಪಂಚಾಯತ ಸಿಇಓ ರೋಷನ್ ಬೇಗ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Share this News
error: Content is protected !!