June 18, 2021

ರಾಜ್ಯದ 42,574 ಆಶಾ ಕಾರ್ಯಕರ್ತೆಯರಿಗೆ, ಒಟ್ಟು ₹12.75 ಕೋಟಿ ರೂಪಾಯಿ ಹಣ ಮಂಜೂರಾತಿ.!

ಬೆಂಗಳೂರು- ರಾಜ್ಯದ 42,574 ಆಶಾ ಕಾರ್ಯಕರ್ತೆಯರಿಗೆ ತಲಾ ₹3,000ದಂತೆ ಒಟ್ಟು ₹12.75 ಕೋಟಿ ರೂಪಾಯಿ ಹಣ ಮಂಜೂರಾತಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಸರಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು.

ಆರ್ಥಿಕ ಪ್ಯಾಕೇಜ್ 2 ರಲ್ಲಿ ತಲಾ ₹3,000 ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಇದೀಗ ಹಣ ಪಾವತಿಸಲು ಮಂಜೂರಾತಿ ಆದೇಶ ನೀಡಲಾಗಿದೆ.

ಇದಕ್ಕೆ ತಗಲುವ 12.75ಕೋಟಿ ರೂ. ವೆಚ್ಚವನ್ನು 2020-21 ನೇ ಸಾಲಿನ ಲೆಕ್ಕ ಶೀರ್ಷಿಕೆ ಗೌರವಧನ ಅಡಿಯಲ್ಲಿ ಬರುವ ಅನುದಾನ ದಲ್ಲಿ ಭರಿಸಬೇಕೆಂದು ಆದೇಶಿಸಲಾಗಿದೆ.

Share this News
error: Content is protected !!