June 13, 2021

Jio 5G Phone| ಜೂನ್ 24ಕ್ಕೆ ಜಿಯೋ 5G ಸ್ಮಾರ್ಟಪೋನ ಬಿಡುಗಡೆ; ಬೆಲೆ ಎಷ್ಟು ಗೊತ್ತಾ.!?

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು 5G ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಆದರೆ ಬಿಡುಗಡೆ ಆಗಲಿರುವ ಜಿಯೋ ಫೋನ್ 5G ವಿಶೇಷವಾಗಿರಲಿದೆ. ಏಕೆಂದರೆ ಇದು ಎರಡು ದೊಡ್ಡ ಟೆಕ್ ದೈತ್ಯ ಕಂಪನಿಗಳ ಸಹಯೋಗದ ಫಲಿತಾಂಶವಾಗಿದೆ.

ಭಾರತದ ನಂಬರ್ ಒನ್ ಟೆಲಿಕಾಂ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ ಸಂಸ್ಥೆಯ ರಿಲಯನ್ಸ್‌ನ ವಾರ್ಷಿಕ ಸಾಮಾನ್ಯ ಸಭೆ (AGM) ಇದೇ ಜೂನ್ 24 ರಂದು ಮಧ್ಯಾಹ್ನ 2ಗಂಟೆಗೆ ನಡೆಯಲಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸಭೆಯಲ್ಲಿ ಹಲವು ಮಹತ್ತರ ತಿರ್ಮಾನಗಳು ಹೊರ ಬೀಳವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಕೈಗೆಟುಕುವ ಬೆಲೆಯಲ್ಲಿ ಜಿಯೋಫೋನ್ 5G ಸ್ಮಾರ್ಟ್‌ಫೋನ್ ನ್ನು ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ.

ಮೊದಲ ಜಿಯೋಫೋನ್ ಆಲ್ಫಾನ್ಯೂಮರಿಕ್ ಕೀಪ್ಯಾಡ್ ಅನ್ನು ಪ್ಯಾಕ್ ಮಾಡಿದರೆ, ಜಿಯೋಫೋನ್ 2 QWERTY ಕೀಪ್ಯಾಡ್ ಅನ್ನು ಒಳಗೊಂಡಿತ್ತು. ಜಿಯೋ QWERTY ಕೀಪ್ಯಾಡ್ ಅಥವಾ ಟಚ್ ಸ್ಟೀನ್‌ನೊಂದಿಗೆ ಬರುವ ಸಾಧ್ಯತೆಯಿದೆ. ಇನ್ನೂ ಜಿಯೋಫೋನ್ ಬಳಕೆದಾರರಿಗೆ ನಿರ್ದಿಷ್ಟವಾಗಿ ಹಲವಾರು ಯೋಜನೆಗಳು ಲಭ್ಯವಿದೆ. 56 ಜಿಯೋಫೋನ್ ಜೊತೆಗೆ ರಿಲಯನ್ಸ್ ಹೊಸ ರೀಚಾರ್ಜ್ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ಹೌದು, ಇತ್ತೀಚೆಗಷ್ಟೆ ಗ್ರಾಹಕರಿಗೆ ಕೈಗೆಟುವ ದರದಲ್ಲಿ ಸೌಲಭ್ಯ ನೀಡುತ್ತಿರುವ ಜಿಯೋ ಜೊತೆ ಗೂಗಲ್ ಕೆಲಸದಲ್ಲಿ ತೊಡಗಿದೆ. ಈ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಮಾಹಿತಿ ನೀಡಿದ್ದು, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನಿರ್ಮಿಸುವ ಯೋಜನೆಗೆ ರಿಲಯನ್ಸ್ ಜಿಯೋ ಜೊತೆಗೆ ನಿಕಟವಾಗಿ ತೊಡಗಿಸಿ ಕೊಳ್ಳುವುದರೊಂದಿಗೆ ಈ ಯೋಜನೆಯ ಕುರಿತಾಗಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದರು. “ಕಡಿಮೆ ಬೆಲೆಯ ಫೋನ್ ತಯಾರಿಕೆಯತ್ತ ನಾವು ಗಮನ ಹರಿಸಿದ್ದೇವೆ. ಅದಕ್ಕಾಗಿ ಜಿಯೋ ಜೊತೆಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಸುಂದರ್ ಪಿಚೈ ಅವರು ವರ್ಚುವಲ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು.

ಜಿಯೋ 5G ಫೋನ್ ಫೀಚರ್ಸ್ ಏನು?:

ಬಹುನಿರೀಕ್ಷಿತ 5G ಜಿಯೋ ಫೋನ್ ಕ್ವಾಲ್ಕಾಮ್ 4xx ಸರಣಿ ಅಥವಾ ಕೆಲವು ಅಘೋಷಿತ ಕಡಿಮೆ-ವೆಚ್ಚದ ಮೀಡಿಯಾ ಟೆಕ್ 5 ಜಿ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಇಇದು ಆಂಡ್ರಾಯ್ಡ್ ಓಎಸ್‌ನಲ್ಲಿ ಚಲಾಯಿಸಲು ಸೂಚಿಸಲಾಗಿದೆ, ಇದು 4G ಯ ಪ್ರಸ್ತುತ ಆವೃತ್ತಿಗಳು KiaOS ನೊಂದಿಗೆ ಬರುತ್ತವೆ. ಮೂಲಗಳ ಪ್ರಕಾರ 5G ಜಿಯೋ ಗೂಗಲ್ ಸ್ಮಾರ್ಟ್‌ಫೋನ್‌ನ ಬೆಲೆ 2500 ರೂ.ಗಳ ಆಸುಪಾಸಿನಲ್ಲಿರಲಿದೆ.

Share this News
error: Content is protected !!